ದಾಖಲೆ ಬರೆದ ಭಾರತದ ವಿದೇಶಿ ವಿನಿಮಯ ಸಂಗ್ರಹ.
ನವದೆಹಲಿ: ವಿದೇಶಿ ವಿನಿಮಯ ಸಂಗ್ರಹದಲ್ಲಿ ಭಾರತ ಇತಿಹಾಸ ಸೃಷ್ಟಿಸಿದೆ. ಮಾರ್ಚ್ 29 ಕ್ಕೆ ಬಂದಂತಹ ವರದಿಯ ಪ್ರಕಾರ ಬರೊಬ್ಬರಿ 645.6 ಬಿಲಿಯನ್ ಡಾಲರ್ ಗಳಷ್ಟು ಮೊತ್ತದ ವಿದೇಶಿ ವಿನಿಮಯವನ್ನು ಭಾರತ ಹೊಂದಿದೆ.
2024ರ ಹಣಕಾಸು ವರ್ಷದಲ್ಲಿ ನಮ್ಮ ವಿದೇಶಿ ವಿನಿಮಯ ಸಂಗ್ರಹ ಸುಮಾರು 2.95 ಬಿಲಿಯನ್ ಡಾಲರ್ ಹೆಚ್ಚಾಗಿದೆ. ಚಿನ್ನದ ಸಂಗ್ರಹವು 673 ಮಿಲಿಯನ್ ಡಾಲರ್ ಏರಿಕೆಯಾಗಿ ಸರಿಸುಮಾರು 52.16 ಬಿಲಿಯನ್ ಡಾಲರ್ ತಲುಪಿದೆ. ಇತ್ತ ಎಸ್‌ಡಿಆರ್ 73 ಮಿಲಿಯನ್ ಡಾಲರ್ ಕಡಿತಗೊಂಡು 18.15 ಬಿಲಿಯನ್ ಡಾಲರ್ ತಲುಪಿದೆ.
ಗೋಲ್ಡ್‌ಮನ್ ಸ್ಯಾಚ್ಸ್‌ನ ವರದಿಯ ಪ್ರಕಾರ, ಬಲವಾದ ವಿದೇಶಿ ಕರೆನ್ಸಿ ಮೀಸಲುಗಳು ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆಯ ಕೇಂದ್ರ ಬ್ಯಾಂಕುಗಳಿಗೆ ಚಂಚಲತೆಯ ಸಮಯದಲ್ಲಿ “ಮಾರುಕಟ್ಟೆಗೆ ಡಾಲರ್‌ಗಳನ್ನು ಸರಬರಾಜು ಮಾಡುವ ಮೂಲಕ ತೀವ್ರ ಕುಸಿತದ ವಿರುದ್ಧ ತಮ್ಮ ಕರೆನ್ಸಿಗಳನ್ನು ಬಫರ್ ಮಾಡಲು” ಅನುಮತಿಸುತ್ತದೆ.
ವಿದೇಶಿ ವಿನಿಮಯ ಸಂಗ್ರಹ ವಿದೇಶಿ ಕರೆನ್ಸಿಗಳ ಸ್ವತ್ತು, ಚಿನ್ನದ ಸಂಗ್ರಹ, ಸ್ಪೆಷಲ್ ಡ್ರಾಯಿಂಗ್ ರೈಟ್ಸ್, ಇಂಟರ್ನ್ಯಾಷನಲ್ ಮಾನಿಟರಿ ಫಂಡ್‌ನೊಂದಿಗಿನ ರಿಸರ್ವ್ ಪೊಸಿಷನ್ ಗಳನ್ನು ಒಳಗೊಂಡಿರುತ್ತದೆ.