India
ವಯನಾಡ್ ಭೂಕುಸಿತ: ಸಂತ್ರಸ್ತರಿಗಾಗಿ ನಿಧಿ ಸಂಗ್ರಹಿಸಲು ಮೂರು ಗಂಟೆ ಸತತ ಭರತನಾಟ್ಯ ಪ್ರದರ್ಶನ ಮಾಡಿದ ಬಾಲಕಿ.
ವಯನಾಡ್: ತಮಿಳುನಾಡಿನ 13 ವರ್ಷದ ಹರಿಣಿ ಶ್ರೀ, ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತ ಪೀಡಿತರಿಗಾಗಿ ನಿಧಿ ಸಂಗ್ರಹಿಸಲು ಮೂರು ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ ನೀಡಿದರು. ಕಳೆದ ವಾರ ಸಂಭವಿಸಿದ ಈ ದುರಂತದಲ್ಲಿ 300ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಗುರುವಾರ, ಹರಿಣಿ ತನ್ನ ಉಳಿತಾಯದ ಹಣವನ್ನೂ ಸೇರಿಸಿ ₹15,000 ದೇಣಿಗೆ Chief Minister’s Distress Relief Fund (CMDRF)ಗೆ ನೀಡಿದರು.
ಹರಿಣಿ, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿಯಾಗಿ ಅವರ ಆಶೀರ್ವಾದವನ್ನೂ ಪಡೆದರು. ಕೇರಳ ಸರ್ಕಾರದ ಸಾರ್ವಜನಿಕ ಮಾಹಿತಿ ಸಂಪರ್ಕ ಇಲಾಖೆ ತಮ್ಮ ಅಧಿಕೃತ ಖಾತೆಯಲ್ಲಿ, “ತಮಿಳುನಾಡಿನ 13 ವರ್ಷದ ಬಾಲಕಿ ಹರಿಣಿ ಶ್ರೀ, ವಯನಾಡ್ ಭೂಕುಸಿತ ಪೀಡಿತರಿಗಾಗಿ ನಿಧಿ ಸಂಗ್ರಹ ಮಾಡಿದ್ದಾರೆ.” ಎಂದು ಪೋಸ್ಟ್ ಮಾಡಿದೆ.