IndiaTechnology
ಟಾಟಾ ಟ್ರಸ್ಟ್ಸ್‌ನಲ್ಲಿ ಮಹತ್ವದ ಬದಲಾವಣೆ: ನೂತನ ಅಧ್ಯಕ್ಷರಾಗಿ ನೋಯಲ್ ಟಾಟಾ..!
ಮುಂಬೈ: ಟಾಟಾ ಸಮೂಹದ ದಾನಶೀಲ ಸಂಸ್ಥೆಯಾದ ಟಾಟಾ ಟ್ರಸ್ಟ್‌ಗೆ ಹೊಸ ಅಧ್ಯಾಯವನ್ನು ತೆರೆದು, ನೋಯಲ್ ಟಾಟಾ ಅವರನ್ನು ಸಂಸ್ಥೆಯ ಹೊಸ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಅವರ ಅಗಲಿದ ಅಣ್ಣ ರತನ್ ಟಾಟಾ ಅವರ ಜವಾಬ್ದಾರಿಯನ್ನು ನೋಯಲ್ ಟಾಟಾ ವಹಿಸಿಕೊಂಡಿದ್ದಾರೆ.
86 ವರ್ಷದ ರತನ್ ಟಾಟಾ, ಅಕ್ಟೋಬರ್ 09, 2024ರ ರಾತ್ರಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಸ್ವರ್ಗಸ್ಥರಾದರು. ರತನ್ ಟಾಟಾ ಅವರ ನಿಧನವು ದಾನಶೀಲ ಕ್ಷೇತ್ರದಲ್ಲಿ ಅಗಾಧ ನೋವು ತಂದಿದೆ. ಟಾಟಾ ಟ್ರಸ್ಟ್ ಟಾಟಾ ಸನ್ಸ್‌ನ 66% ಪಾಲುದಾರಿಕೆಯನ್ನು ಹೊಂದಿದ್ದು, ಈ ಹೊಸ ನೇಮಕವು ಭಾರೀ ಪ್ರಾಮುಖ್ಯತೆಯನ್ನು ಪಡೆಯುತ್ತಿದೆ.
ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್ ಎಲ್ಲಾ ಟಾಟಾ ಕಂಪನಿಗಳ ಮುಖ್ಯ ಪಾಲುದಾರ ಸಂಸ್ಥೆಯಾಗಿದ್ದು, ನೋಯಲ್ ಟಾಟಾ ಅವರ ನೇಮಕವು ಮುಂದಿನ ದಿನಗಳಲ್ಲಿ ಯಾವ ರೀತಿಯ ಬದಲಾವಣೆಗಳನ್ನು ತರುತ್ತದೆ ಎನ್ನುವುದು ಉದ್ಯಮ ಜಗತ್ತಿನಲ್ಲಿ ಕುತೂಹಲ ಮೂಡಿಸಿದೆ.