ಜೆರೂಸಲೇಮ್: ಇಸ್ರೇಲ್ ಸೇನೆ ಹಮಾಸ್ ನಾಯಕ ಯಹ್ಯಾ ಸಿನ್ವಾರ್ ಅವರನ್ನು ದಕ್ಷಿಣ ಗಾಜಾ ಪ್ರದೇಶದಲ್ಲಿ ಹತ್ಯೆ ಮಾಡಿದ ಪರಿಣಾಮ, ಹಮಾಸ್ ವಿರುದ್ಧ ಮಹತ್ವದ ಸೈನಿಕ ಗೆಲುವು ಸಾಧಿಸಿದೆ. ಕಳೆದ ಒಂದು ವರ್ಷದಿಂದ 61 ವರ್ಷದ ಸಿನ್ವಾರ್ 2023ರ ಅಕ್ಟೋಬರ್ 7ಕ್ಕೆ ಇಸ್ರೇಲ್ ನಲ್ಲಿ ನಡೆದ ಭೀಕರ ಹತ್ಯೆಗಳಿಗೆ ಪ್ರಮುಖ ಮಾಸ್ಟರ್‌ಮೈಂಡ್ ಎಂದು ಇಸ್ರೇಲ್ ಆರೋಪಿಸಿದೆ.
ಇದರಿಂದ ಹಮಾಸ್ ವಿರುದ್ಧದ ಯುದ್ಧದಲ್ಲಿ ಇಸ್ರೇಲ್ ದೊಡ್ಡ ಗೆಲುವನ್ನು ದಾಖಲಿಸಿದೆ ಎಂದು ಇಸ್ರೇಲ್ ಮೂಲಗಳು ಹೇಳಿವೆ. “ಇದು ಒಂದು ವರ್ಷ ಕಾಲದ ಹುಡುಕಾಟದ ಅಂತ್ಯ,” ಎಂದು ಇಸ್ರೇಲ್ ಸೈನ್ಯ ಹೇಳಿದ್ದು, “ಅಕ್ಟೋಬರ್ 16, 2024ರಂದು ದಕ್ಷಿಣ ಗಾಜಾದಲ್ಲಿ ನಡೆದ ಸೈನಿಕ ಕಾರ್ಯಾಚರಣೆಯಲ್ಲಿ ಯಹ್ಯಾ ಸಿನ್ವಾರ್ ಅವರನ್ನು ಹೊಡೆದುರುಳಿಸಲಾಗಿದೆ” ಎಂದು ಸ್ಪಷ್ಟಪಡಿಸಿದೆ.
ಡ್ರೋನ್ ದೃಶ್ಯಗಳಲ್ಲಿ ಅಡಗಿತ್ತು ಧ್ವಂಸದ ಕೊನೆ ಕ್ಷಣಗಳು!
ಇಸ್ರೇಲ್ ಸೇನೆ ಬಿಡುಗಡೆ ಮಾಡಿದ ಡ್ರೋನ್ ದೃಶ್ಯಗಳು, ಕೊನೆಯ ಕ್ಷಣಗಳಲ್ಲಿ ಯಹ್ಯಾ ಸಿನ್ವಾರ್ ಅವರೊಬ್ಬರೇ ಇದ್ದು, ತೀವ್ರ ಗಾಯಗೊಂಡಿದ್ದು, ತಮ್ಮ ಮುಖ ಮುಚ್ಚಿಕೊಂಡು ಡ್ರೋನ್ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿರುವುದನ್ನು ತೋರಿಸುತ್ತವೆ.
ಸಿನ್ವಾರ್ ಅವರ ಜೊತೆ ಯಾವುದೇ ಇತರ ವ್ಯಕ್ತಿಗಳು ಇಲ್ಲದಿರುವುದು ಇಸ್ರೇಲ್ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಹಮಾಸ್ ಮುಖ್ಯಸ್ಥರ ಬಲಿ: ಹೈ ಅಲರ್ಟ್ ನಲ್ಲಿ ಇಸ್ರೇಲ್
ಯುದ್ಧದ ನಿರ್ಣಾಯಕ ಹಂತದಲ್ಲಿ ಇಸ್ರೇಲ್ ಸೈನ್ಯ ಹಮಾಸ್ ನ ಮುಖಂಡರನ್ನು ಒಂದೊಂದಾಗಿ ಹೊಡೆದುರುಳಿಸುತ್ತಿದೆ. ಹಮಾಸ್ ನ ಸೈನಿಕ ಮುಖ್ಯಸ್ಥ ಮೊಹಮ್ಮದ್ ದೈಫ್ ನನ್ನು ಈ ವರ್ಷ ಮೊದಲು ಹತ್ಯೆ ಮಾಡಲಾಗಿತ್ತು ಎಂದು ಇಸ್ರೇಲ್ ಹೇಳಿದೆ. ಆದರೆ ಇದನ್ನು ಹಮಾಸ್ ಅಧಿಕೃತವಾಗಿ ಖಚಿತಪಡಿಸಿಲ್ಲ.