National
ಚಲಿಸುತ್ತಿದ್ದ ರೈಲಿನಿಂದ ಗರ್ಭಿಣಿ ಮಹಿಳೆಯನ್ನು ತಳ್ಳಿದ ಕಾಮುಕ: ದೇಶವನ್ನೇ ಬೆಚ್ಚಿಬೀಳಿಸಿದ ಘಟನೆ!

ಕೋಯಂಬತ್ತೂರು: ತಮಿಳುನಾಡಿನ ಕೋಯಂಬತ್ತೂರಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ ಮಹಿಳೆಯೊಬ್ಬರನ್ನು ಹೈದರಾಬಾದ್‌ನ ಕಾಮುಕನೊಬ್ಬ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ, ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದಾಗ ಓಡುತ್ತಿರುವ ರೈಲಿನಿಂದ ತಳ್ಳಿಬಿಟ್ಟಿದ್ದಾನೆ! ಈ ಭೀಕರ ಘಟನೆ ಕೊಯಂಬತ್ತೂರು-ತಿರುಪತಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಗುರುವಾರ ಬೆಳಿಗ್ಗೆ 10:30ಕ್ಕೆ ನಡೆದಿದ್ದು, ಮಹಿಳೆಗೆ ಗಂಭೀರ ಗಾಯಗಳಾಗಿವೆ.
ನಡೆದ ಘಟನೆ ಇದು:
36 ವರ್ಷದ ಗರ್ಭಿಣಿ ಮಹಿಳೆ ತಿರುಪ್ಪುರದಿಂದ ಚಿತ್ತೂರಿಗೆ ತಮ್ಮ ತಾಯಿಯ ಮನೆಗೆ ಹೋಗುತ್ತಿದ್ದರು. ಮಹಿಳೆಯರು ಮಾತ್ರ ಪ್ರಯಾಣಿಸುವ ಬೋಗಿಯಲ್ಲಿ ಕುಳಿತುಕೊಂಡಿದ್ದ ಈಕೆಗೆ ಮೊದಲಿಗೆ ಭದ್ರತೆ ಇದ್ದರೂ, ಜೋಲಾರ್ಪಟ್ಟೈ ರೈಲು ನಿಲ್ದಾಣ ತಲುಪಿದಾಗ ಇತರ ಮಹಿಳೆಯರು ಇಳಿದಿದ್ದರು. ಈ ವೇಳೆ 27 ವರ್ಷದ ಹೇಮರಾಜ್ ಎಂಬಾತ ಬೋಗಿಗೆ ನುಗ್ಗಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಮುಂದಾದನು!
ಮಹಿಳೆ ಪ್ರತಿರೋಧ ಕೊಟ್ಟಾಗ ಅಮಾನವೀಯ ಕೃತ್ಯ!
- ಕಾಮುಕನಿಂದ ತಪ್ಪಿಸಿಕೊಳ್ಳಲು ಮಹಿಳೆ ಅವನಿಗೆ ತಿರುಗೇಟು ನೀಡಿದರು.
- ಇದರಿಂದ ಕೋಪಗೊಂಡ ದುಷ್ಕರ್ಮಿ ಆಕೆಯನ್ನು ಓಡುತ್ತಿರುವ ರೈಲಿನಿಂದ ದಬ್ಬಿ ತಳ್ಳಿಬಿಟ್ಟ!
- ಪರಿಣಾಮ ಮಹಿಳೆ ಕೈ, ಕಾಲು, ತಲೆ ಹಾಗೂ ದೇಹದ ಹಲವೆಡೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ!
- ರೈಲ್ವೆ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಧಾವಿಸಿ ಗಾಯಗೊಂಡ ಮಹಿಳೆಯನ್ನು ವೆಲ್ಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
- ಈಗಾಗಲೇ ಕಾಮುಕ ಹೇಮರಾಜ್‌ಗೆ ಹಳೆ ಅಪರಾಧ ದಾಖಲೆಗಳು ಇದ್ದು, ಈ ಹಿಂದೆ ಕೊಲೆ ಮತ್ತು ಕಳ್ಳತನಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿದ್ದ!
- ಇದೀಗ ಜನರು ಆತನಿಗೆ ಶಿಕ್ಷೆಯಾಗಬೇಕೆಂದು ಜನತೆ ಆಗ್ರಹ!