Politics
ಹಿಜಾಬ್ ಬ್ಯಾನ್ ಮಾಡಿದ ಮುಸ್ಲಿಂ ದೇಶ.

ದುಶಾಂಬೆ: ‘ಹಿಜಾಬ್ ಬ್ಯಾನ್’ ವಿವಾದ ಹಿಂದೊಮ್ಮೆ ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ಕೋಮು ಗಲಭೆಗಳು ಹಾಗೂ ಬೇಕು ಬೇಡಗಳ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿತ್ತು. ಹಿಜಾಬ್ ಧಾರಣೆ ಮುಸ್ಲಿಂ ಧರ್ಮದ ಪದ್ಧತಿ ಹಾಗೂ ಮುಸ್ಲಿಂ ಹೆಣ್ಣು ಮಕ್ಕಳಿಗೆ ರಕ್ಷಣೆ ಎಂದು ಕೆಲವು ಇಸ್ಲಾಂ ವಿದ್ವಾಂಸರು ಹೇಳಿದ್ದರು. ಆದರೆ ಈಗ ಮುಸ್ಲಿಂ ಬಹುಸಂಖ್ಯಾತ ದೇಶವಾದ ತಜಿಕಿಸ್ತಾನ್ ತನ್ನ ದೇಶದಲ್ಲಿ ಹಿಜಾಬನ್ನು ನಿಷೇಧ ಮಾಡಿದೆ.
ಈ ಕುರಿತು ತನ್ನ ಸಂಸತ್ತಿನಲ್ಲಿ ಸಂಪೂರ್ಣ ಬೆಂಬಲ ಪಡೆದು, ಹಿಜಾಬ್ ಹಾಗೂ ಅದಕ್ಕೆ ಸಂಬಂಧಿಸಿದ ಇನ್ನಿತರ ಉಡುಪನ್ನು ‘ಏಲಿಯನ್ ಗಾರ್ಮೆಂಟ್’ ಎಂಬ ಹಣೆಪಟ್ಟಿಯನ್ನು ಕೊಟ್ಟು ಬ್ಯಾನ್ ಮಾಡಿದೆ. ಈ ನಿಯಮವನ್ನು ಉಲ್ಲಂಘನೆ ಮಾಡಿದವರಿಗೆ ದೊಡ್ಡ ಪ್ರಮಾಣದ ಜುಲ್ಮಾನೆಯನ್ನು ವಿಧಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಹಿಜಾಬ್ ಬ್ಯಾನ್ ಮಾಡಲು ‘ತಮ್ಮ ಪೂರ್ವಜರ ಮೌಲ್ಯಗಳನ್ನು ಮತ್ತು ರಾಷ್ಟ್ರೀಯ ಸಂಸ್ಕೃತಿಯನ್ನು ರಕ್ಷಿಸಲು.’ ಎಂಬ ಕಾರಣವನ್ನು ಸರ್ಕಾರ ನೀಡಿದೆ.