Sports

ಭಾರತ ಕ್ರಿಕೆಟ್ ತಂಡವನ್ನು ಸ್ವಾಗತಿಸಿದ ವಿಶೇಷ ‘ಕೇಕ್’.

ದೆಹಲಿ: ಭಾರತೀಯ ಕ್ರಿಕೆಟ್ ತಂಡವನ್ನು ಇಂದು ಇಡೀ ದೇಶವೇ ಹೆಮ್ಮೆಯಿಂದ ಹಾಗೂ ಸಂಭ್ರಮದಿಂದ ಬರಮಾಡಿಕೊಂಡಿದೆ. ದೆಹಲಿಗೆ ಆಗಮಿಸಿದ ಭಾರತೀಯ ಕ್ರಿಕೆಟ್ ತಂಡವನ್ನು, ಒಂದು ವಿಶೇಷ ಕೇಕ್ ಸ್ವಾಗತ ಮಾಡಿದೆ. ಯಾವುದದು ಕೇಕ್? ಆ ಕೇಕ್‌ನ್ನು ಯಾರು ಮಾಡಿದ್ದು? ಇದರ ವಿಶೇಷವೇನು ಎಂದು ತಿಳಿಯೋಣ.

ನಮ್ಮ ಕ್ರಿಕೆಟ್ ತಂಡ ಇಂದು ದೆಹಲಿಯ ಚಾಣಕ್ಯಪುರಿಯಲ್ಲಿ ಇರುವ ಪ್ರತಿಷ್ಠಿತ ಫೈವ್ ಸ್ಟಾರ್ ಹೋಟೆಲ್, ‘ಐಟಿಸಿ ಮೌರ್ಯ’ ದಲ್ಲಿ ತಂಗಲಿದ್ದಾರೆ. ಈ ಸಂದರ್ಭದಲ್ಲಿ ಹೋಟೆಲ್ ನಿರ್ವಹಣಾ ಮಂಡಳಿ ಭಾರತ ತಂಡವನ್ನು ಸ್ವಾಗತಿಸಲು ವಿಶೇಷ ಕೇಕ್‌ನ್ನು ತಯಾರಿಸಿದೆ. ಇದರ ವಿಶೇಷತೆ ಏನೆಂದರೆ, ಈ ಕೇಕ್ ಬಣ್ಣ ನಮ್ಮ ಭಾರತೀಯ ಕ್ರಿಕೆಟ್ ತಂಡದ ಜೆರ್ಸಿ ಬಣ್ಣವಾಗಿದೆ. ಮೇಲ್ಬಾಗದಲ್ಲಿ ವಿಶ್ವಕಪ್ ಟ್ರೋಫಿ, ಅದರ ಕೆಳಗೆ ಭಾರತೀಯ ಕ್ರಿಕೆಟ್ ಲೋಗೋ, ಅದರ ಜೊತೆಗೆ ವಿಶ್ವಕಪ್ ಗೆದ್ದ ಸಂದರ್ಭದ ಖುಷಿಯ ಕ್ಷಣಗಳ ಭಾವಚಿತ್ರಗಳು ಕೂಡ ಈ ಕೇಕ್ ಮೇಲೆ ಇದೆ.

ಈ ವಿಶೇಷ ಕಲಾಕೃತಿಯ ಕೇಕ್‌ನ್ನು ನಿರ್ಮಿಸಿದ ಶೇಪ್ ಶಿವನಿತ್ ಪಹೋಜಾ ಮಾತನಾಡಿ, “ಇದರ ಪ್ರಮುಖ ಅಂಶವೆಂದರೆ ಈ ಟ್ರೋಫಿ, ಇದು ನಿಜವಾದ ಟ್ರೋಫಿಯಂತೆ ಕಾಣಿಸಬಹುದು ಆದರೆ ಇದನ್ನು ಚಾಕೊಲೇಟ್‌ನಿಂದ ಮಾಡಲಾಗಿದೆ. ವಿಜೇತ ತಂಡಕ್ಕೆ ಇದು ನಮ್ಮ ಸ್ವಾಗತ. ನಾವು ವಿಶೇಷ ಸ್ಥಳದಲ್ಲಿ ಉಪಹಾರದ ವ್ಯವಸ್ಥೆ ಮಾಡಿದ್ದೇವೆ ಮತ್ತು ನಾವು ಅವರಿಗೆ ವಿಶೇಷ ಉಪಹಾರವನ್ನು ನೀಡುತ್ತೇವೆ.” ಎಂದರು.

Show More

Leave a Reply

Your email address will not be published. Required fields are marked *

Related Articles

Back to top button