“ಆರಾಮ್ ಅರವಿಂದ್ ಸ್ವಾಮಿ”: ಟ್ರೇಲರ್‌ನಲ್ಲೇ ಕಚಗುಳಿ ನೀಡಿದ ಚಿತ್ರ, ಥಿಯೇಟರ್‌ನಲ್ಲಿ ಹೇಗಿರಬಹುದು..?!

ಬೆಂಗಳೂರು: ಕಾಮಿಡಿ, ಎಮೋಷನ್, ಆಕ್ಷನ್ ಮಿಶ್ರಣದ “ಆರಾಮ್ ಅರವಿಂದ್ ಸ್ವಾಮಿ” ಸಿನಿಮಾದ ಟ್ರೇಲರ್ ಬಹಳ ನಿರೀಕ್ಷೆ ಹೆಚ್ಚಿಸಿದೆ. ಅನೀಶ್ ತೇಜೇಶ್ವರ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ, ಅರವಿಂದ್ ಸ್ವಾಮಿ ತನ್ನ ಜೀವನದ ಒತ್ತಡಗಳು, ಪ್ರೀತಿ, ಮದುವೆ, ಹಣದ ಕಷ್ಟ, ಕುಟುಂಬದ ಸಮಸ್ಯೆಗಳ ನಡುವೆ ಹಾಸ್ಯಭರಿತವಾಗಿ ನಿಮ್ಮ ಮುಂದೆ ಬರಲಿದ್ದಾನೆ. ಚಿತ್ರದ ಟ್ರೇಲರ್ ನೋಡಿದರೆ ಇದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಎನ್ನುವುದು ತಕ್ಷಣವೇ ಸ್ಪಷ್ಟವಾಗುತ್ತದೆ.
ಅನೀಶ್‌ಗೆ ಬಿಗ್ ಬ್ರೇಕ್ ಸಿಗಬಹುದೇ?
ಈ ಚಿತ್ರದ ಮೂಲಕ ಅನೀಶ್ ತೇಜೇಶ್ವರ್‌ಗೆ ಹೊಸ ಬಿಗ್ ಬ್ರೇಕ್ ದೊರಕಲಿದೆ ಎಂದು ಲೆಕ್ಕಹಾಕಲಾಗುತ್ತಿದೆ. ನಟಿ ಮಿಲನಾ ನಾಗರಾಜ್ ಮತ್ತು ಹೃತಿಕಾ ಶ್ರೀನಿವಾಸ್ ಈ ಚಿತ್ರದಲ್ಲಿ ನಾಯಕಿಯರಾಗಿ ಅಭಿನಯಿಸಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಸಂಯೋಜನೆ, ಛಾಯಾಗ್ರಾಹಕ ವೈವಿಬಿ ಶಿವಸಾಗರ್ ಅವರ ಕ್ಯಾಮೆರಾ ಕೌಶಲ್ಯ, ಮತ್ತು ಉಮೇಶ್ ಆರ್‌ಬಿ ಅವರ ಸಂಕಲನ ಈ ಚಿತ್ರವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ.
ಟಿಕೆಟ್ ಆಫರ್!
“ಆರಾಮ್ ಅರವಿಂದ್ ಸ್ವಾಮಿ” ಇದೇ ತಿಂಗಳ 22 ರಂದು ತೆರೆಗೆ ಬರಲು ಸಜ್ಜಾಗಿದೆ. ಚಿತ್ರ ಪ್ರದರ್ಶನದ ಮೊದಲ ಮೂರು ದಿನಗಳಲ್ಲಿ ಟಿಕೆಟ್ ಬೆಲೆ ಕೇವಲ ₹99 ರೂ. ಇದ್ದು, ಪ್ರೇಕ್ಷಕರಿಗೆ ಇದು ವಿಶೇಷ ಆಫರ್ ಆಗಿದೆ. ಥಿಯೇಟರ್ ನಲ್ಲಿ ಮೂರು ದಿನಗಳವರೆಗೆ ಮಾತ್ರ ಈ ಆಫರ್ ಇರುತ್ತದೆ. ಹೀಗಾಗಿ ಸಾಕಷ್ಟು ಪ್ರೇಕ್ಷಕರು ಈ ಆಫರ್ಸ್ ಲಾಭ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.