Sports

ಹೊಸ ಅಧ್ಯಾಯದ ಭರವಸೆ ಇಂದಾದರೂ ಉಳಿಯುವುದೇ?

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಎದುರಾಗಲಿದ್ದಾರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು. ಅಭಿಮಾನಿಗಳ ಭರವಸೆ ಇಂದಾದರೂ ಉಳಿಸಿಕೊಳ್ಳಲಿದೆಯೇ ಆರ್‌ಸಿ‌ಬಿ‌?

ಇಂಡಿಯನ್ ಪ್ರೀಮಿಯರ್ ಲೀಗ್‌ನ ಈ ಬಾರಿಯ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದು, ಇಲ್ಲಿಯವರೆಗೆ ಕೇವಲ 1 ಗೆಲುವನ್ನು ಸಾಧಿಸಿರುವ ಆರ್‌ಸಿಬಿ, ಅಂಕಪಟ್ಟಿಯಲ್ಲಿ ಕೆಳ ಸ್ಥಾನವನ್ನು ಹೊಂದಿದೆ. ಅಭಿಮಾನಿಗಳು ಈ ಬಾರಿಯ ಕಳಪೆ ಪ್ರದರ್ಶನಕ್ಕೆ ತಂಡದ ಮ್ಯಾನೇಜ್ಮೆಂಟ್‌ನ ಆಯ್ಕೆಯೇ ಕಾರಣ ಎಂದು ದೂಷಿಸುತ್ತಿದ್ದಾರೆ.

ಇತ್ತ ಸನ್ ರೈಸರ್ಸ್ ಹೈದರಾಬಾದ್ ತಂಡ ಆಡಿದ 5 ಪಂದ್ಯಗಳಲ್ಲಿ 3 ಪಂದ್ಯಗಳನ್ನು ಗೆದ್ದು. ಅಂಕಪಟ್ಟಿಯಲ್ಲಿ 4ನೇ ಸ್ಥಾನವನ್ನು ಪಡೆದು ಮೊದಲಾರ್ಧದಲ್ಲಿ ನಾವು ಬಲಿಷ್ಠ ತಂಡ ಎಂದು ಹೇಳುತ್ತಿದೆ.

ಇಂದು ಬೆಂಗಳೂರಿನಲ್ಲಿ ಈ ಪಂದ್ಯ ನಡೆಯಲಿದ್ದು, ಆರ್‌ಸಿ‌ಬಿ ಅಭಿಮಾನಿಗಳು ಸಾಗರದ ರೀತಿ ಕ್ರೀಡಾಂಗಣದಲ್ಲಿ ತುಂಬುವುದಂತೂ ನಿಜ. ಆದರೆ ಅಭಿಮಾನಿಗಳ ನಿರೀಕ್ಷೆಯನ್ನು ಇಂದು ಬೆಂಗಳೂರು ತಂಡ ಉಳಿಸಿಕೊಳ್ಳಲಿದೆಯೇ ಎಂಬುದು ಈಗಿರುವ ಪ್ರಶ್ನೆ.

Show More

Related Articles

Leave a Reply

Your email address will not be published. Required fields are marked *

Back to top button