Sports
ಯಾರಾಗಲಿದ್ದಾರೆ ಇಂದಿನ ಪಂದ್ಯದ ವಿಜೇತರು? ಪಂಜಾಬ್ ಕಿಂಗ್ಸ್ ಅಥವಾ ರಾಜಸ್ಥಾನ ರಾಯಲ್ಸ್.

ಪಂಜಾಬ್: ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ಮತ್ತೆ ಎದುರಾಗಲಿದ್ದಾರೆ ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು. ಯಾರಾಗಲಿದ್ದಾರೆ ಇಂದಿನ ಪಂದ್ಯದ ವಿಜೇತರು?
ತನ್ನ ಹೋಂ ಗ್ರೌಂಡಲ್ಲಿ ಆಡುತ್ತಿರುವ ಪಂಜಾಬ್ ತಂಡಕ್ಕೆ ಇಂದು ಅಭಿಮಾನಿಗಳ ಬೆಂಬಲ ಇರುವುದಂತೂ ನಿಜ. ಆದರೆ ತಾವು ಆಡಿದ 5 ಪಂದ್ಯಗಳಲ್ಲಿ ಕೇವಲ 2 ನ್ನು ಗೆದ್ದಿರುವ ಪಂಜಾಬ್ ತಂಡ ಅಂಕಪಟ್ಟಿಯ 8ನೇ ಸ್ಥಾನದಲ್ಲಿದೆ. ಇಂದು ಝಿಂಟಾ ತಂಡ ಯಾವ ಮೋಡಿ ಮಾಡಿ ಗೆಲುವು ಸಾಧಿಸಲಿದೆ ಎಂದು ನೋಡಬೇಕಾಗಿದೆ.
ಅದೇ ರೀತಿ ರಾಜಸ್ಥಾನ ರಾಯಲ್ಸ್ ತಂಡ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಅಂಕಪಟ್ಟಿಯ ಮೊದಲಾರ್ಧದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. 8 ಅಂಕಗಳೊಂದಿಗೆ ಟಾಪರ್ ಆಗಿ, ತಾವು ಈ ಬಾರಿಯ ಬಲಿಷ್ಠ ತಂಡ ಎಂದು ತೋರಿಸುತ್ತಿದ್ದಾರೆ.
ನೆಟ್ಟಿಗರು ಈ ಮ್ಯಾಚಿನ ಭವಿಷ್ಯವನ್ನು ಊಹಿಸಿದ್ದು, 55% ನೆಟ್ಟಿಗರು ರಾಜಸ್ಥಾನ ರಾಯಲ್ಸ್ ಪರವಾಗಿದ್ದು, ಇಂದು ಗೆಲುವು ಆರ್‌ಆರ್ ಅವರದ್ದೇ ಎಂದು ನಂಬಿದ್ದಾರೆ.