Politics
5 ಲಕ್ಷ ಮತಗಳ ಅಂತರದಲ್ಲಿ ಗೆದ್ದ ಅಮಿತ್ ಷಾ.

ಗಾಂಧಿನಗರ: ಗುಜರಾತ್ ರಾಜ್ಯದ ಗಾಂಧಿನಗರ ಲೋಕಸಭಾ ಚುನಾವಣೆ ಕ್ಷೇತ್ರದಿಂದ ಸ್ಪರ್ಧಿಸಿದ ಬಿಜೆಪಿಯ ಚಾಣಾಕ್ಷ ರಾಜಕಾರಣಿ ಶ್ರೀ ಅಮಿತ್ ಶಾ ಅವರು, ಐದು ಲಕ್ಷ ಮತಗಳ ಅಂತರದಿಂದ ಭರ್ಜರಿ ಗೆಲುವನ್ನು ಸಾಧಿಸಿದ್ದಾರೆ.
ಕಳೆದ ಬಾರಿ 2019ರಲ್ಲಿ ಅಮಿತ್ ಶಾ ಅವರು 5,57, 014 ಮತಗಳ ಅಂತರದಲ್ಲಿ ಗೆದ್ದು ಬಂದಿದ್ದರು. ಆದರೆ ಈ ಬಾರಿ 7 ಲಕ್ಷ ಮತಗಳ ಅಂತರದಿಂದ ಗೆಲ್ಲುವ ಆತ್ಮವಿಶ್ವಾಸವನ್ನು ತೋರಿದ ಅಮಿತ್ ಶಾ ಅವರು, ಕಳೆದ ಬಾರಿಯಷ್ಟೇ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.