Sports
ಭಯೋತ್ಪಾದಕ ಸಂಘಟನೆಯ ಉಗ್ರನೊಂದಿಗೆ ವೇದಿಕೆ ಹಂಚಿಕೊಂಡ ಅರ್ಷದ್ ನದೀಮ್.

ಇಸ್ಲಾಮಾಬಾದ್: ಪಾಕಿಸ್ತಾನದ ಒಲಿಂಪಿಕ್ ಚಿನ್ನದ ಪದಕ ವಿಜೇತ ಅರ್ಷದ್ ನದೀಮ್ ಮತ್ತು ಲಷ್ಕರ್-ಇ-ತೊಯ್ಬಾ (LeT) ಉಗ್ರ ಮೊಹಮ್ಮದ್ ಹ್ಯಾರಿಸ್ ದಾರ್ ನಡುವಿನ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ಈ ಚಿತ್ರಗಳ ಜತೆಗೆ ಹರಿಯುತ್ತಿರುವ ವಿಡಿಯೋದಲ್ಲಿ, ದಾರ್, ನದೀಮ್‌ರನ್ನು ಅಭಿನಂದಿಸುತ್ತಾ, “ನಿನ್ನ ಸಾಧನೆ ಮುಸ್ಲಿಂ ಸಮುದಾಯದ ಹೆಮ್ಮೆ” ಎಂದು ಹೇಳಿರುವುದು ಕಂಡುಬರುತ್ತದೆ.
ಮೋಹಮ್ಮದ್ ಹ್ಯಾರಿಸ್ ದಾರ್, ಲಷ್ಕರ್-ಇ-ತೊಯ್ಬಾ ಉಗ್ರ ಮತ್ತು ಮಿಲ್ಲಿ ಮುಸ್ಲಿಂ ಲೀಗ್ (MML) ಪಕ್ಷದ ಜಂಟಿ ಕಾರ್ಯದರ್ಶಿಯಾಗಿದ್ದು, ಈ ಪಕ್ಷವನ್ನು ಲಷ್ಕರ್-ಇ-ತೊಯ್ಬಾ ಉಗ್ರ ಹಫೀಜ್ ಸಯೀದ್ ಸ್ಥಾಪಿಸಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ವಿಮರ್ಶೆಗಳು ವ್ಯಕ್ತವಾಗುತ್ತಿವೆ.
ಅರ್ಶದ್ ನದೀಮ್, ಪಾಕಿಸ್ತಾನಕ್ಕೆ ಒಲಿಂಪಿಕ್ ಚಿನ್ನದ ಪದಕ ತಂದುಕೊಟ್ಟ ಕ್ರೀಡಾಪಟುವಾಗಿದ್ದು, ಇದೀಗ ಉಗ್ರನೊಂದಿಗೆ ತಾವು ತೋರಿದ ಸಂಬಂಧದಿಂದಾಗಿ ವಿವಾದಕ್ಕೆ ಸಿಲುಕಿದ್ದಾರೆ.