Politics

ಟ್ರಂಪ್ ಮೇಲೆ ಹತ್ಯೆ ಯತ್ನ: ಯಾರು ಈ ರಿಯನ್ ವೆಸ್ಲಿ ರೌತ್..?!

ಫ್ಲೋರಿಡಾ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಭಾನುವಾರ ಫ್ಲೋರಿಡಾದಲ್ಲಿ ನಡೆದ ಹತ್ಯಾ ಯತ್ನವನ್ನು ಎಫ್‌ಬಿಐ ತಡೆಯುವಲ್ಲಿ ಯಶಸ್ವಿಯಾಗಿದೆ. 58 ವರ್ಷದ ರಿಯನ್ ವೆಸ್ಲಿ ರೌತ್ ಎಂಬ ಆರೋಪಿಯನ್ನು ಸೀಕ್ರೆಟ್ ಸರ್ವಿಸ್ ಏಜೆಂಟರು ಬಂಧಿಸಿದ್ದಾರೆ. ಈ ವೇಳೆ ಟ್ರಂಪ್‌ನ ಗಾಲ್ಫ್ ಕೋರ್ಸ್ ಗಡಿಯ ಬಳಿ ಗುಂಡಿನ ದಾಳಿ ನಡೆದಿದ್ದು, ಎಕೆ-47 ಮಾದರಿಯ ರೈಫಲ್, ಒಂದು ಗೋಪ್ರೋ ಕ್ಯಾಮೆರಾ ಸ್ಥಳದಿಂದ ವಶಪಡಿಸಿಕೊಂಡಿದ್ದಾರೆ.

ಆರೋಪಿಯು ಕಾಡಿನಲ್ಲಿ ತಂಗಿದ್ದಾಗ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ಗುಂಡು ಹಾರಿಸಿದರೂ, ರೌತ್ ಕಪ್ಪು ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ. ಬಳಿಕ ಕಾರನ್ನು ಗುರುತಿಸಿದ ನಂತರ, ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಯಾರು ಈ ರಿಯನ್ ವೆಸ್ಲಿ ರೌತ್?

ಆರೋಪಿಯು ನಾರ್ತ್ ಕ್ಯಾರೋಲಿನಾದ ಗ್ರೀನ್ಸ್‌ಬೊರೋನ ಮಾಜಿ ಕನ್ಸ್ಟ್ರಕ್ಷನ್ ಕಾರ್ಮಿಕನಾಗಿದ್ದು, ಸೇನೆಗೆ ಯಾವುದೇ ನೇರ ಸಂಬಂಧ ಇಲ್ಲದಿದ್ದರೂ, 2022ರ ನಂತರ ಯುಕ್ರೈನ್‌ ನಲ್ಲಿ ರಷ್ಯಾದ ವಿರುದ್ಧ ನಡೆದ ಯುದ್ಧದಲ್ಲಿ ಭಾಗವಹಿಸುವ ಇಚ್ಛೆಯನ್ನು ಅನೇಕ ಬಾರಿ ವ್ಯಕ್ತಪಡಿಸಿದ್ದಾನೆ.

“ನಾನು ಯುದ್ಧದಲ್ಲಿ ಭಾಗವಹಿಸಲು ಮತ್ತು ನನ್ನನ್ನು ನಾನು ತೊಡಗಿಸಿಕೊಳ್ಳಲು ಸಿದ್ದನಿದ್ದೇನೆ” ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದ. ರೌತ್ ಹಕ್ಕುಗಳು ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡಲು ನಾಗರಿಕರು ಯುದ್ಧದ ದಿಕ್ಕಿನತ್ತ ಸಾಗಬೇಕು ಎಂದು ಬಯಸಿದ್ದನು.

ಟ್ರಂಪ್ ಸುರಕ್ಷಿತ:

“ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಪಾಯದಿಂದ ದೂರವಾಗಿದ್ದಾರೆ,” ಎಂದು ಅವರ ಅಭಿಯಾನ ವಕ್ತಾರ ಸ್ಟೀವನ್ ಚ್ಯೂಂಗ್ ತಿಳಿಸಿದ್ದಾರೆ. “ನಾನು ಸುರಕ್ಷಿತವಾಗಿದ್ದೇನೆ, ಆತಂಕ ಪಡುವ ಅಗತ್ಯವಿಲ್ಲ!” ಎಂದು ಸ್ವತಃ ಟ್ರಂಪ್ ಪುನರುಚ್ಚರಿಸಿದ್ದಾರೆ.

ಇದು ಈ ತಿಂಗಳಿನಲ್ಲಿ ನಡೆದ ಎರಡನೇ ಹತ್ಯೆ ಯತ್ನವಾಗಿದ್ದು, ಪೆನ್ಸಿಲ್ವೇನಿಯಾದಲ್ಲಿ ನಡೆದ ಹತ್ಯೆ ಯತ್ನದಲ್ಲಿ ಟ್ರಂಪ್ ಅವರ ಕಿವಿಯನ್ನು ಸಣ್ಣದಾಗಿ ಛೇದಿಸಿ ಗುಂಡು ಹಾರಿಸಲಾಗಿತ್ತು.

Show More

Leave a Reply

Your email address will not be published. Required fields are marked *

Related Articles

Back to top button