ಢಾಕಾ: ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಪಾಕಿಸ್ತಾನದಿಂದ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳ ಖರೀದಿಗೆ ಮುಂದಾಗಿದೆ. 40,000 ಸುತ್ತಿನ ಮದ್ದು ಗುಂಡುಗಳು, 2000 ಟ್ಯಾಂಕ್ ಶೆಲ್‌ಗಳು, 40 ಟನ್ ಆರ್‌ಡಿಎಕ್ಸ್ ಸ್ಫೋಟಕ, ಮತ್ತು 2,900 ಹೈ ಇಂಟೆನ್ಸಿಟಿ ಪ್ರಾಜೆಕ್ಟೈಲ್‌ಗಳನ್ನು ಖರೀದಿಸುವ ಯೋಜನೆಯಿದೆ.
ಈ ಸರಬರಾಜು ಮೂರು ಹಂತಗಳಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಬಾಂಗ್ಲಾದೇಶದ ಇಂತಹ ಖರೀದಿಯಿಂದ, ಪ್ರಸ್ತುತ ಭಾರತದಲ್ಲಿ ಭದ್ರತೆಯ ಬಗ್ಗೆ ಆತಂಕ ಹೆಚ್ಚಾಗಿದೆ. ಇದು ಮುಂದಿನ ದಿನಗಳಲ್ಲಿ ಏನು ಬದಲಾವಣೆ ತರುತ್ತದೆ ಎಂಬುದರ ಮೇಲೆ ಎಲ್ಲರ ಗಮನ ಇರಲಿದೆ.
ಈ ನಿರ್ಧಾರ ಬಾಂಗ್ಲಾದೇಶದ ಭದ್ರತಾ ತಂತ್ರದಲ್ಲಿ ದೊಡ್ಡ ಬದಲಾವಣೆಗಾ? ಅಥವಾ ಈ ಶಸ್ತ್ರಾಸ್ತ್ರ ಖರೀದಿ ಹಿಂದೆ ಇನ್ನು ಬೇರೆ ನಿಗೂಢ ಸತ್ಯಗಳು ಇದೆಯಾ? ಎಂಬ ಕುತೂಹಲ ಹೆಚ್ಚಿದೆ.