ಭಾರತದ ಹಸಿರುಕ್ರಾಂತಿ ಪಿತಾಮಹ ಎಂದೇ ಖ್ಯಾತಿ ಪಡೆದಿದ್ದ ದಿವಂಗತ. ಎಂ.ಎಸ್ ಸ್ವಾಮಿನಾಥನ್ ಅವರಿಗೆ 2024ರ ಭಾರತರತ್ನ ಪ್ರಶಸ್ತಿ ನೀಡಲು ಸರ್ಕಾರ ನಿರ್ಧಾರ ಮಾಡಿದೆ.
1947ರಲ್ಲಿ ದೇಶ ವಿಭಜನೆಯ ನಂತರ, ಶೇ.70ರಷ್ಟು ಆಹಾರ ಬೆಳೆಯಲು ಯೋಗ್ಯವಾದ ಭೂಮಿಯನ್ನು ಪಾಕಿಸ್ತಾನಕ್ಕೆ ಬಿಟ್ಟು ಕೊಡಲಾಯಿತು. ಅದೇ ರೀತಿ ಬ್ರಿಟಿಷರಿಂದ ಸೂರೆಗೊಂಡ ಭಾರತ ತನ್ನ ಪ್ರಜೆಗಳಿಗೆ ಒಂದು ಹೊತ್ತಿನ ಊಟ ಮಾಡಲು ಹೇಳಿತ್ತು. ಆಹಾರಕ್ಕಾಗಿ ಬೇರೆ ದೇಶಗಳ ಮೊರೆಹೋಗುವ ದಯನೀಯ ಸ್ಥಿತಿ ಭಾರತಕ್ಕೆ ಬಂದಿತ್ತು. ಈ ಸಂದರ್ಭದಲ್ಲಿ ಉದಯಿಸದ್ದೇ ಹಸಿರುಕ್ರಾಂತಿ. 1960ರ ದಶಕದಲ್ಲಿ ಗೋದಿಯ ಇಳುವರಿ ವಾರ್ಷಿಕ 10 ಮಿಲಿಯನ್ ಟನ್ ನಿಂದ 17 ಮಿಲಿಯನ್ ಟನ್ ವರೆಗೆ ಜಿಗಿತ ಸಾಧಿಸಿತು. ಇದರ ಶ್ರೇಯಸ್ಸು ಶ್ರೀ ಸ್ವಾಮಿನಾಥನ್ ಅವರಿಗೆ ಸೇರುತ್ತದೆ. ಇವರಿಂದಾಗಿ ಭಾರತ 1960ರ ದಶಕದಲ್ಲಿ ತೀವ್ರವಾದ ಬರಗಾಲದಿಂದ ಪಾರಾಯಿತು.
ಎಂ.ಎಸ್. ಸ್ವಾಮಿನಾಥನ್ ಅವರಿಗೆ ಸಂದಂತಹ ಪ್ರಶಸ್ತಿಗಳು ಇಂತಿವೆ.
- ಪದ್ಮಶ್ರೀ (1967)
- ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ (1971)
- ಪದ್ಮಭೂಷಣ (1972)
- ಆಲ್ಬರ್ಟ್ ಐನ್ಸ್ಟೈನ್ ವಿಶ್ವ ವಿಜ್ಞಾನ ಪ್ರಶಸ್ತಿ (1986)
- ಮೊಟ್ಟ ಮೊದಲ ವಿಶ್ವ ಆಹಾರ ಪ್ರಶಸ್ತಿ (1987)
- ಪದ್ಮವಿಭೂಷಣ (1989)
- ಭಾರತರತ್ನ (2024)
ಸ್ವಾಮಿನಾಥನ್ ಅವರು 28ನೇ ಡಿಸೆಂಬರ್, 2023ರಂದು, ತಮ್ಮ 98ನೇ ವಯಸ್ಸಿನಲ್ಲಿ ಚೆನ್ನೈನಲ್ಲಿ ದೈವಾದೀನರಾದರು.
ಡಾ. ಎಮ್.ಎಸ್ ಸ್ವಾಮಿನಾಥನ್ ಅವರಿಗೆ ಸಂದ ಈ ಭಾರತರತ್ನದ ಗೌರವ, ಇಡೀ ವಿಜ್ಞಾನ ಕುಲವೇ ಹೆಮ್ಮೆ ಪಡುವ ವಿಷಯ.