ಭೀಮ ಟ್ರೇಲರ್ ಬಿಡುಗಡೆ: ಹೇಗಿದೆ ದುನಿಯಾ ವಿಜಯ್ ಭೀಮಾವತಾರ?
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಚಿತ್ರ ರಸಿಕರನ್ನು ಭಾರೀ ಕಾಯಿಸಿದ್ದ, ದುನಿಯಾ ವಿಜಯ್ ಅಭಿನಯದ ‘ಭೀಮ’ ಚಿತ್ರದ ಟ್ರೈಲರ್ ಇಂದು ಬಿಡುಗಡೆ ಆಗಿದೆ. ಹೆವಿ ಆಕ್ಷನ್ ಸಿನ್‌ಗಳನ್ನು ಒಳಗೊಂಡ ಈ ಚಿತ್ರ ಚಿತ್ರಮಂದಿರಗಳಲ್ಲಿ ಅಭಿಮಾನಿಗಳಿಗೆ ರೋಮಾಂಚನ ಉಂಟು ಮಾಡುವುದಂತೂ ನಿಜ. ಪ್ರಸ್ತುತ ಭೂಗತ ಜಗತ್ತಿನ ಕರಾಳ ಮುಖವನ್ನು ಅನಾವರಣ ಮಾಡಲು ಈ ಚಿತ್ರ ಸಿದ್ದವಾಗಿದೆ. ಆಗಸ್ಟ್ 09 ಕ್ಕೆ ಮೂಹೂರ್ತ ಪಿಕ್ಸ್ ಮಾಡಿ ಚಿತ್ರ ಮಂದಿರಕ್ಕೆ ಅಟ್ಯಾಕ್ ಮಾಡಲಿದ್ದಾನೆ ಭೀಮ.
ಈ ಚಿತ್ರ ಖ್ಯಾತ ನಟ ನಟಿಯರ ಜೊತೆಗೆ ಹೊಸ ಮುಖಗಳಿಗೆ ಕೂಡ ಅವಕಾಶ ನೀಡಿದೆ. ರಂಗಾಯಣ ರಘು, ಅಚ್ಯುತ್ ಕುಮಾರ್, ಕಲ್ಯಾಣಿ ರಾಜು, ಕಾಕ್ರೋಚ್ ಸುಧೀರ್ ಅವರೊಂದಿಗೆ ಅಶ್ವಿನಿ ಅಂಬರೀಶ್, ಡ್ರಾಗನ್ ಮಂಜು ಅಂತಹ ಹೊಸ ಪ್ರತಿಭೆಗಳನ್ನು ಕೂಡ ತೆರೆಯ ಮೇಲೆ ನೋಡಬಹುದು.
ಚಿತ್ರದ ಕಥೆ ಹಾಗೂ ನಿರ್ದೇಶನವನ್ನು ದುನಿಯಾ ವಿಜಯ್ ಕುದ್ದು ಮಾಡಿದ್ದಾರೆ. ಇದರೊಂದಿಗೆ ಈ ಚಿತ್ರಕ್ಕೆ ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ಹಣ ಹೂಡಿಕೆ ಮಾಡಿದ್ದಾರೆ. ಸಂಗೀತ ನಿರ್ದೇಶನ ಚರಣ್ ರಾಜ್, ಛಾಯಾಗ್ರಹಣ ಶಿವ ಸೇನಾ ಹಾಗೂ ಸಂಭಾಷಣೆ ಬರಹ ಮಾಸ್ತಿ ಉಪ್ಪರಹಳ್ಳಿ ಮಾಡಿದ್ದಾರೆ.