Politics
ಬಿಜೆಪಿಯ ಮೊದಲ ಅಭ್ಯರ್ಥಿ ಪಟ್ಟಿ ಇಂದು ಬಿಡುಗಡೆ.
2024ರ ಲೋಕಸಭಾ ಚುನಾವಣೆಗೆ ಇಂದು ಭಾರತೀಯ ಜನತಾ ಪಾರ್ಟಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಹಲವು ದಿನಗಳಿಂದ ಬಿಜೆಪಿಯ ವರಿಷ್ಠ ನಾಯಕರಾದ, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ, ಜೆ.ಪಿ. ನಡ್ಡಾ ಹಾಗೂ ಕರ್ನಾಟಕದ ಹಿರಿಯರ ಮುಖಂಡರು ಸೇರಿ ಸಭೆ ನಡೆಸಿದ್ದರು.
ಇದರ ಫಲಿತಾಂಶ ಎಂಬಂತೆ ಇಂದು ಲೋಕಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಹೆಸರನ್ನು ಸೂಚಿಸುತ್ತಿದೆ. ಸರಿಸುಮಾರು 15ರಿಂದ 17 ಅಭ್ಯರ್ಥಿಗಳ ಹೆಸರನ್ನು ಮೊದಲ ಪಟ್ಟಿಯಲ್ಲಿ ಬಿಜೆಪಿ ತಿಳಿಸಲಿದೆ ಎಂದು ಅಂದಾಜಿಸಲಾಗಿದೆ.
ಇತ್ತ ಈ ಬಾರಿ, ಯಾವ ಹಾಲಿ ಸಂಸದರು ತಮ್ಮ ಕ್ಷೇತ್ರವನ್ನು ಉಳಿಸಿಕೊಳ್ಳಲಿದ್ದಾರೆ, ಯಾವ ಸಂಸದರನ್ನು ಬಿಜೆಪಿ ತನ್ನ ಪಟ್ಟಿಯಿಂದ ಹೊರಗಿಡಲಿದೆ ಎಂದು ತಿಳಿಯಲು, ಸಂಸದರೂ ಸೇರಿದಂತೆ, ರಾಜ್ಯದ ಮತದಾರರು ಕೂಡ ಅತೀವ ಕುತೂಹಲ ತೋರಿದ್ದಾರೆ.
‘ಅಬ್ ಕಿ ಬಾರ್ 400 ಪಾರ್’ ಎಂಬ ಗುರಿಯನ್ನು ಹೊಂದಿರುವ ಭಾರತೀಯ ಜನತಾ ಪಾರ್ಟಿ, ಕರ್ನಾಟಕದಲ್ಲಿ ಯಾವ ರೀತಿಯ ವ್ಯೂಹವನ್ನು ರಚನೆ ಮಾಡಿದೆ ಎಂದು ತಿಳಿಯಲು ಕೆಲವೇ ಗಂಟೆಗಳು ಬಾಕಿಯಿದೆ.