ಹೊತ್ತಿ ಉರಿದ ಬಿಎಂಟಿಸಿ ಬಸ್; ತಪ್ಪಿದ ಜೀವಾಪಾಯ.
ಬೆಂಗಳೂರು: ರಾಜ್ಯಧಾನಿ ಬೆಂಗಳೂರಿನಲ್ಲಿ ಪ್ರತಿದಿನ ಓಡಾಡುವ ಬಿಎಂಟಿಸಿ ಬಸ್ಸುಗಳ ಗುಣಮಟ್ಟದ ಮೇಲೆ ಸಂಶಯ ಪಡುವ ಸಮಯ ಈಗ ಬಂದಿದೆ. ಇಂದು ಕೆಎಂ 57ಎಫ್ 1232 ಸಂಖ್ಯೆಯ ಬಿಎಂಟಿಸಿಯ ಬಸ್ಸ್ ನಗರದ ಮಹಾತ್ಮ ಗಾಂಧಿ ರಸ್ತೆಯ, ಅನಿಲ್ ಕುಂಬ್ಳೆ ವೃತ್ತದ ಬಳಿ ಬೆಂಕಿಗೆ ಆಹುತಿಯಾಗಿದೆ.
ಈ ಘಟನೆ ಇಂದು ಮುಂಜಾನೆ 8:30ರಿಂದ 9 ಗಂಟೆಯ ಒಳಗೆ ನಡೆದಿದೆ ಎಂದು ತಿಳಿದುಬಂದಿದೆ. ಬಸ್ಸಿಗೆ ಅಗ್ನಿ ಆಗುತ್ತಾ ಸಂಭವಿಸಿದ ಕುರಿತು 8:51 ಕ್ಕೆ ಅಗ್ನಿಶಾಮಕದಳಕ್ಕೆ ತಿಳಿದು ಬಂದಿದೆ.
ಬಿಎಂಟಿಸಿಯ ಮೂಲಗಳು ಬೆಂಕಿಗೆ ಕಾರಣವೇನೆಂದು ವಿಶ್ಲೇಷಿಸುವುದು ಇನ್ನೂ ಬಾಕಿಯಿದೆ. ಬಸ್ಸಿನಲ್ಲಿದ್ದ ಚಾಲಕ ಮತ್ತು ಕಂಡಕ್ಟರ್ ಮೊದಲು ಇಂಜಿನ್‌ನಿಂದ ಹೊಗೆ ಹೊರಹೊಮ್ಮುವುದನ್ನು ಕಂಡು ಕಾರ್ಪೊರೇಷನ್‌ಗೆ ಮಾಹಿತಿ ನೀಡಿದರು. ಅಗ್ನಿಶಾಮಕದಳದವರು ಬರುವವರೆಗೆ ಕಂಡಕ್ಟರ್ ಬೆಂಕಿಯನ್ನು ನಿಯಂತ್ರಿಸಲು ಬಸ್‌ನೊಳಗಿನ ಅಗ್ನಿಶಾಮಕವನ್ನು ಬಳಸಿದರು ಎಂದು ವರದಿಯಾಗಿದೆ.
ಈ ಘಟನೆ ದಿನನಿತ್ಯ ಬಿಎಂಟಿಸಿ ಬಸ್ಸಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ, ತಾವು ಸಂಚರಿಸುವ ಬಸ್ಸು ಎಷ್ಟು ಸುರಕ್ಷಿತವಾಗಿದೆ, ಎಂಬ ಬಗ್ಗೆ ಅನುಮಾನ ಹುಟ್ಟುಸುವಂತಾಗಿದೆ.