ದರ್ಶನ್ ಅವರನ್ನು ಬಚಾವ್ ಮಾಡಲಿದ್ದಾರೆಯೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್?!

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹಿನ್ನಲೆಯಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಹಾಗೂ ತಮ್ಮ ದಿನಕರ್ ತೂಗುದೀಪ ಅವರು ಇಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದರು. ಈ ಭೇಟಿ ರಾಜ್ಯದ ಜನರಲ್ಲಿ ಭಾರೀ ಕುತೂಹಲ ಕೆರಳಿಸಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅಂದರ್ ಆಗಿ ಈಗ ತಿಂಗಳು ಕಳೆದಿದೆ. ನ್ಯಾಯಾಲಯ ದರ್ಶನ್ ಅವರಿಗೆ ಆಗಸ್ಟ್ 1 ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುತೇಕ ಎಲ್ಲಾ ಸಾಕ್ಷಿಗಳನ್ನು ಪೋಲಿಸರು ಕಲೆ ಹಾಕಿದ್ದಾರೆ.
ಈಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ದಿನಕರ್ ತೂಗುದೀಪ ಹಾಗೂ ವಿಜಯಲಕ್ಷ್ಮಿ ದರ್ಶನ್ ಅವರು ಭೇಟಿ ಮಾಡಿದ್ದು, ಈ ಪ್ರಕರಣದ ಕುರಿತಂತೆ ಶಿವಕುಮಾರ್ ಅವರ ಬಳಿ ಕೂಲಂಕಷವಾಗಿ ಮಾತನಾಡಲಿದ್ದಾರೆ ಎನ್ನಲಾಗಿದೆ. ಈ ಸಮಸ್ಯೆಯಿಂದ ದರ್ಶನ್ ಅವರನ್ನು ಹೊರತರಲು ದಾರಿ ಹುಡುಕುತ್ತಿರುವ ದರ್ಶನ್ ಕುಟುಂಬದವರಿಗೆ ಡಿಕೆಶಿ ಅವರು ಏನು ಸಲಹೆ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.