India
ಚಂಡೀಗಡ್ – ದಿಬ್ರುಗಡ್ ಎಕ್ಸ್‌ಪ್ರೆಸ್ ರೈಲು ಪಲ್ಟಿ; ಒಬ್ಬ ಪ್ರಯಾಣಿಕನ ಸಾವು.
ಉತ್ತರ ಪ್ರದೇಶ: ಇಂದು ಮಧ್ಯಾಹ್ನ ಚಂಡೀಗಢ ಮತ್ತು ದಿಬ್ರುಗಡ್ ಮದ್ಯೆ ಓಡಾಡುವ ರೈಲು, ಉತ್ತರ ಪ್ರದೇಶದ ಪಿಕೌರಾ ಬಳಿ ಹಳಿ ತಪ್ಪಿ ಪಲ್ಟಿ ಆಗಿರುವ ಘಟನೆ ನಡೆದಿದೆ. ಈ ಘಟನೆಯಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಒರ್ವ ವ್ಯಕ್ತಿ ಅಸು ನೀಗಿರುವ ಸುದ್ದಿ ಬಂದಿದೆ.
ಒಟ್ಟು ಹನ್ನೆರಡು ಭೋಗಿಗಳನ್ನು ಒಳಗೊಂಡಿದ್ದ ರೈಲಿನಲ್ಲಿ, ಎಸಿ ಕಂಪಾರ್ಟ್ಮೆಂಟ್ ಹೊಂದಿದ್ದ ನಾಲ್ಕು ಬೋಗಿಗಳು ಹಳಿ ತಪ್ಪಿದೆ. ಈಗಾಗಲೇ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಪ್ರಯಾಣಿಕರನ್ನು ರೈಲಿನಿಂದ ಹೊರ ತರುವ ಕಾರ್ಯ ನಡೆಯುತ್ತಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಅಪಘಾತ ನಡೆದ ಸ್ಥಳಕ್ಕೆ ತಕ್ಷಣ ತಲುಪುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದು, ಪರಿಹಾರ ಕಾರ್ಯಾಚರಣೆಯನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಗಾಯಾಳುಗಳಿಗೆ ಸಕಾಲದಲ್ಲಿ ಚಿಕಿತ್ಸೆ ಕೊಡಿಸಲು ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ.