ಕೊನೆಗೂ ‘ಮುಡ’ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ.

ಬೆಂಗಳೂರು: ರಾಜ್ಯದಲ್ಲಿ ಕೆಲವು ದಿನಗಳಿಂದ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಮೂಡ ಹಗರಣದ ಕುರಿತು, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರ್ನಾಟಕ ಟಾಕ್ ಸುದ್ದಿ ವಾಹಿನಿಯಲ್ಲಿ ಸಂಪೂರ್ಣ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದರ ವಿಡಿಯೋ ತುಣುಕನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
“ಇದರಲ್ಲಿ ಯಾವುದೇ ಹಗರಣವಿಲ್ಲ, ನಮ್ಮ ಹೆಂಡತಿಯವರಿಗೆ 3 ಎಕರೆ 16 ಗುಂಟೆ, ಸರ್ವೆ ನಂಬರ್ 464ರಲ್ಲಿ ಬಂದಿರ್ತಕ್ಕಂತದ್ದು, ಕಾನೂನು ರೀತಿಯಾಗಿ ಬಂದಿದೆ. ಅವರ ಅಣ್ಣನಿಂದ ಕಾನೂನು ರೀತಿ ಗಿಫ್ಟ್ ಮೂಲಕ ಬಂದಿದೆ. ಅವರ ಅಣ್ಣ ಅದನ್ನು (ಭೂಮಿಯನ್ನು) ಖರೀದಿಸಿದ್ದು 2004ರಲ್ಲಿ. ಧಾನದ ಬಂದಿದ್ದು 2010ರಲ್ಲಿ. ಆಮೇಲೆ ಅದು ಕನ್ವರ್ಟೆಡ್ ಲ್ಯಾಂಡ್ ಆಯಿತು… ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅದನ್ನು ಅಕ್ರಮವಾಗಿ ಸೈಟ್ ಮಾಡಿ ಹಂಚಿಬಿಟ್ಟಿರುತ್ತಾರೆ. 2014ರಲ್ಲಿ ಮತ್ತೆ ಬದಲಿ ಜಾಗ ಕೊಡುವಂತೆ ಕೇಳಿಕೊಳ್ಳಲಾಯಿತು. ಆಗ ನಾನೇ ಮುಖ್ಯಮಂತ್ರಿಯಾಗಿ ಇದ್ದಿದ್ದರಿಂದ, ಹೇಳುವುದು ಬೇಡ ಎಂದು ಸಲಹೆ ಮಾಡಿದ್ದೆ. ಆಮೇಲೆ ಬಿಜೆಪಿ ಸರ್ಕಾರ ಬಂದ ಮೇಲೆ, 2021 ರಲ್ಲಿ ಆ ಸೈಟನ್ನು ಕೊಡುತ್ತಾರೆ…” ಎಂದಿದ್ದಾರೆ.
ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದ ಭೂ ಹಗರಣದಲ್ಲಿ ಮುಖ್ಯಮಂತ್ರಿ ಹಾಗೂ ಅವರ ಪತ್ನಿಯವರ ಹೆಸರನ್ನು ಎದ್ದು ಕಂಡಿದೆ. ವಿರೋಧ ಪಕ್ಷವಾದ ಭಾರತೀಯ ಜನತಾ ಪಕ್ಷ ಇದರ ವಿರುದ್ಧವಾಗಿ ನಿನ್ನೆ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ತೀವ್ರ ಚರ್ಚೆಗೆ ಗುರಿಯಾದ ಈ ಹಗರಣ ಕಾಂಗ್ರೆಸ್ ಸರ್ಕಾರಕ್ಕೆ ಮುಳುವಾಗಲಿದೆಯೇ? ವಿರೋಧ ಪಕ್ಷ ಇದನ್ನು ಹೇಗೆ ದಾಳವಾಗಿ ಬಳಸಿಕೊಳ್ಳಲಿದೆ ಎಂಬುದಕ್ಕೆ ಕಾಲವೇ ಉತ್ತರ ನೀಡಬೇಕಾಗಿದೆ.