India
ದಕ್ಷಿಣ ಕಾಶಿ ಗೋಕರ್ಣಕ್ಕೆ ನುಗ್ಗಿದ ಕೊಳಚೆ ನೀರು.
ಉತ್ತರಕನ್ನಡ: ಜಲಪಾತಗಳ ಉತ್ತರ ಕನ್ನಡದಲ್ಲಿ ಬಾರಿ ಮಳೆಯ ಪರಿಣಾಮ ಹಲವಾರು ಕಡೆ ಅವಘಡವಾಗಿದೆ. ಹಾಗು ಕರ್ನಾಟಕದ ಪ್ರಸಿದ್ಧ ತೀರ್ಥಕ್ಷೇತ್ರ ಆದ ದಕ್ಷಿಣ ಕಾಶಿ ಎಂದುಕರೆಯಲ್ಪಡುವ, ಹಿಂದೂಗಳ ಧಾರ್ಮಿಕ ಕ್ಷೇತ್ರವಾದ ಗೋಕರ್ಣದ ಶ್ರೀಮಹಾಬಲೇಶ್ವರ ದೇವಸ್ಥಾನಕ್ಕೆ ನೀರು ನುಗ್ಗಿದೆ ಮತ್ತು ಆತ್ಮ ಲಿಂಗದವರೆಗೆ ಕೊಳಚೆ ನೀರು ನುಗ್ಗಿದೆ. ಪವಿತ್ರ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳು ಎಚ್ಚರವಹಿಸಬೇಕಾಗಿದೆ.
ಗರ್ಭಗುಡಿಗೆ ಹೊಕ್ಕ ನೀರನ್ನು ಹೊರಹಾಕಲು ಸಿಬ್ಬಂದಿವರ್ಗದವರು ಸುರಿಯುವ ಮಳೆಯನ್ನು ಅಬ್ಬರವನ್ನು ಲೆಕ್ಕಿಸದೇ ಗರ್ಭಗುಡಿಯ ನೀರು ಕಾಲಿ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಶ್ರೀ ಕ್ಷೇತ್ರದ ಗರ್ಭಗುಡಿಯ ಸ್ವಚ್ಚತೆಯನ್ನು ಮಾಡಿದ ನಂತರ ದೇವಸ್ಥಾನದ ಪೂಜೆ ಎಂದಿನಂತೆ ನಡೆಸಿ ಕೊಡುವುದರಲ್ಲಿ ದೇವಸ್ಥಾನದ ಆಡಳಿತ ಮಂದಿ ಯಶಸ್ವಿ ಆಗಿದ್ದಾರೆ.