Politics
ಪತನವಾಯ್ತು ಪಟ್ನಾಯಕ್ ಸರ್ಕಾರ.

ಭುವನೇಶ್ವರ: ಸತದ 24 ವರ್ಷಗಳಿಂದ ಒರಿಸ್ಸಾದಲ್ಲಿ ಆಡಳಿತ ನಡೆಸುತ್ತಿದ್ದ ನವೀನ್ ಪಟ್ಟಾಯಕ್ ಅವರ ಸರ್ಕಾರಕ್ಕೆ ಬ್ರೇಕ್ ಹಾಕಿದೆ ಭಾರತೀಯ ಜನತಾ ಪಕ್ಷ. ಇಂದು ನವೀನ್ ಪಟ್ಟಾಯಕ್ ಅವರು ರಾಜ್ಯಪಾಲರಾದ ರಘುಬರ್ ದಾಸ್ ಅವರಿಗೆ ತಮ್ಮ ರಾಜಿನಾಮೆ ಪತ್ರ ನೀಡಿದ್ದಾರೆ. ಈ ಬಾರಿ ಒರಿಸ್ಸಾ ಮತದಾರರು ಬದಲಾವಣೆಯನ್ನು ಬಯಸಿದ್ದಾರೆ.
ಒಟ್ಟು 147 ವಿಧಾನಸಭಾ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷ 79 ಸ್ಥಾನಗಳನ್ನು ಗೆದ್ದಿದೆ. ಹಾಗೆಯೇ, ಬಿಜು ಜನತಾದಳ ಪಕ್ಷವು 51 ಸ್ಥಾನ ಗಳಿಸಲು ಅಷ್ಟೇ ಶಕ್ತವಾಗಿದೆ. 24 ವರ್ಷಗಳಿಂದ ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆದಿದ್ದ ನವೀನ್ ಪಟ್ಟಾಯಕ್ ಅವರು ಈ ಬಾರಿ ಸೋಲನ್ನು ಕಂಡಿದ್ದಾರೆ. ಬಿಜು ಜನತಾದಳ ಒರಿಸ್ಸಾದ ಅಧಿಕೃತ ವಿರೋಧ ಪಕ್ಷವಾಗಿದೆ.