“FEAR” ಸಿನಿಮಾ ಫಸ್ಟ್ ಲುಕ್ ಬಿಡುಗಡೆ: ಸಸ್ಪೆನ್ಸ್ ಸೃಷ್ಟಿಸಿದ ನಾಯಕಿ ವೇದಿಕಾ!
ಬೆಂಗಳೂರು: ನಟಿ ವೇದಿಕಾ ಮುಖ್ಯಪಾತ್ರದಲ್ಲಿ ನಟಿಸಿರುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ “FEAR” ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಸ್ಟಾರ್ ನಿರ್ದೇಶಕ ಮತ್ತು ನೃತ್ಯ ನಿರ್ದೇಶಕ ಪ್ರಭುದೇವ ಬಿಡುಗಡೆ ಮಾಡಿದ್ದಾರೆ. ಇಂದು ಸಾಮಾಜಿಕ ಜಾಲತಾಣಗಳ ಮೂಲಕ ಫಸ್ಟ್ ಲುಕ್ ಅನಾವರಣ ಮಾಡಿದ ಪ್ರಭುದೇವ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
FEAR ಸಿನಿಮಾ ದತ್ತಾತ್ರೇಯ ಮೀಡಿಯಾ ಬ್ಯಾನರ್ ಅಡಿಯಲ್ಲಿ ಎಆರ್ ಅಭಿ ನಿರ್ಮಿಸುತ್ತಿದ್ದು, ನಿರ್ದೇಶನವನ್ನು ಡಾ. ಹರಿತಾ ಗೋಗಿನೇನಿ ಮಾಡಿದ್ದಾರೆ. ಅರವಿಂದ್ ಕೃಷ್ಣ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಗೊಳ್ಳಲಿರುವ ಈ ಚಿತ್ರ ಹಲವು ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ 60ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗೆದ್ದಿದ್ದು, ಬಿಡುಗಡೆಗೂ ಮುನ್ನವೇ ಗಮನ ಸೆಳೆದಿದೆ.
ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ನಾಯಕಿ ವೇದಿಕಾ ಕತ್ತಲ ಕೋಣೆಯಲ್ಲಿ ಭಯಭೀತಳಾಗಿ ಕಾಣಿಸುವ ದೃಶ್ಯವಿದೆ, ಇದು ಸಿನಿರಸಿಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ಪವಿತ್ರ ಲೋಕೇಶ್, ಸಯಾಜಿ ಶಿಂಧೆ, ಅನೀಶ್ ಕುರುವಿಲ್ಲ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
FEAR ಚಿತ್ರವು ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಪ್ರೇಕ್ಷಕರನ್ನು ರೋಮಾಂಚಿತಗೊಳಿಸಲು ಸಿದ್ಧವಾಗುತ್ತಿದೆ.