India

ಜಿಐ ಟ್ಯಾಗ್ ಪಡೆದ ಭಾರತದ 60 ಸಾಂಪ್ರದಾಯಿಕ ಉತ್ಪನ್ನಗಳು.

ನವದೆಹಲಿ: ಭಾರತದ ವಿವಿಧ ಭಾಗದ ಸುಮಾರು 60 ಸಾಂಪ್ರದಾಯಿಕ ಉತ್ಪನ್ನಗಳಿಗೆ ಜಿಐ ಟ್ಯಾಗ್ ಅಂದರೆ, ಭೌಗೋಳಿಕ ಸೂಚನಾ ಟ್ಯಾಗನ್ನು ನೀಡಲಾಗಿದೆ. ಈ ಟ್ಯಾಗನ್ನು ನಿರ್ದಿಷ್ಟ ಭೌಗೋಳಿಕ ಮೂಲವನ್ನು ಹೊಂದಿರುವ ಹಾಗೂ ನಿರ್ದಿಷ್ಟ ಸ್ಥಳಕ್ಕೆ ಸಂಬಂಧಿಸಿದ ಗುಣಲಕ್ಷಣಗಳನ್ನು ಹೊಂದಿರುವ ಉತ್ಪನ್ನಗಳಿಗೆ ನೀಡಲಾಗುತ್ತದೆ. ಇಲ್ಲಿಯವರೆಗೆ ಭಾರತದ ಒಟ್ಟು 635 ಉತ್ಪನ್ನಗಳಿಗೆ ಜಿಐ ಟ್ಯಾಗ್ ನೀಡಲಾಗಿದೆ.

ಈ ಜಿಐ ಟ್ಯಾಗಗಳಲ್ಲಿ ಕರ್ನಾಟಕವು 46 ಉತ್ಪನ್ನಗಳನ್ನು ಹೊಂದಿದೆ. ಅವುಗಳಲ್ಲಿ ಪ್ರಮುಖವಾದವು: ಮೈಸೂರು ರೇಷ್ಮೆ, ಮೈಸೂರು ಅಗರಬತ್ತಿ, ಕೂರ್ಗ್ ಕಿತ್ತಳೆ, ನಂಜನಗೂಡು ಬಾಳೆಹಣ್ಣು, ಇಳಕಲ್ ಸೀರೆ, ಧಾರವಾಡ ಪೇಡ, ಅಪ್ಪೆಮಿಡಿ ಮಾವಿನಕಾಯಿ, ಬ್ಯಾಡಗಿ ಮೆಣಸಿನಕಾಯಿ, ಸಿರ್ಸಿ ಅಡಿಕೆ, ಚಿಕ್ಕಮಗಳೂರು ಅರೇಬಿಕಾ ಕಾಫಿ ಮತ್ತು ಇತ್ಯಾದಿ.

ಜಿಐ ಟ್ಯಾಗ್‌ಗಳನ್ನು ಸರಕುಗಳ ಬೌಗೋಳಿಕ ಸೂಚನೆಗಳ (ನೊಂದಣಿ ಮತ್ತು ರಕ್ಷಣೆ) ಕಾಯ್ದೆ 1999ರ ಅಡಿಯಲ್ಲಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ, ಉದ್ಯಮ ಪ್ರಚಾರ ಮತ್ತು ಆಂತರಿಕ ವ್ಯಾಪಾರ ಇಲಾಖೆಯು ನೀಡುತ್ತದೆ.

Show More

Leave a Reply

Your email address will not be published. Required fields are marked *

Related Articles

Back to top button