AutomobilesIndia
ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ನೊಂದಣಿಗೆ ಕೊನೆಯ ದಿನಾಂಕ 15.09.2024.
ಬೆಂಗಳೂರು: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಮಂತ್ರಾಲಯ 2018-19 ರಲ್ಲಿ ನಿರ್ಣಯಿಸಿದಂತೆ, ಭಾರತದ ವಾಹನ ಚಾಲಕರು, 1ನೇ ಏಪ್ರಿಲ್ 2019 ಕ್ಕಿಂತ ಮುಂಚಿತವಾಗಿ ತಮ್ಮ ವಾಹನಗಳನ್ನು ನೋಂದಣಿ ಮಾಡಿಕೊಂಡಿದ್ದಾರೆ, ಅಂತಹ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸೂಚಿಸಿತ್ತು. ಅದೇ ರೀತಿಯಾಗಿ ಕರ್ನಾಟಕ ಸರ್ಕಾರ ಎಚ್ಎಸ್ಆರ್‌ಪಿ ಸಂಖ್ಯಾ ಫಲಕವನ್ನು ಹೊಂದಲು ದಿನಾಂಕ: 17.08.2023 ರಂದು ಅಧಿಸೂಚನೆ ಹೊರಡಿಸಿತ್ತು.
ಈ ನೋಂದಣಿ ಫಲಕವನ್ನು ಅಳವಡಿಸಿಕೊಳ್ಳಲು ಕೊನೆಯ ದಿನಾಂಕವನ್ನು ಕರ್ನಾಟಕ ರಾಜ್ಯ ಸರ್ಕಾರ ಈಗ ದಿನಾಂಕ: 15.09.2024 ರವರೆಗೆ ವಿಸ್ತರಿಸಿದೆ. ಕರ್ನಾಟಕ ರಾಜ್ಯದಲ್ಲಿ ದಿನಾಂಕ: 18.08.2023 ರಿಂದ 05.07.2024 ರವರೆಗೆ ಒಟ್ಟು 47,64,293 ವಾಹನಗಳು ಎಚ್ಎಸ್ಆರ್‌ಪಿ ನೋಂದಣಿ ಫಲಕಗಳನ್ನು ಅಳವಡಿಸಿಕೊಂಡಿದೆ.