“ದರ್ಶನ್‌ಗಾಗಿ ಪೂಜೆ ಆಗಿದ್ದರೆ ನಾನು ಬರುತ್ತಿರಲಿಲ್ಲ” – ನಟ ಜಗ್ಗೇಶ್ ವಿವಾದಾತ್ಮಕ ಹೇಳಿಕೆ.
ಬೆಂಗಳೂರು: ಇಂದು ಚಾಮರಾಜಪೇಟೆ ಕಲಾವಿದರ ಸಂಘದಲ್ಲಿ ಚಿತ್ರರಂಗದ ಏಳಿಗೆಗಾಗಿ ವಿಶೇಷ ಪೂಜೆಯ ಕಾರ್ಯಕ್ರಮ ಜರುಗಿದ್ದು, ನವರಸನಾಯಕ ಜಗ್ಗೇಶ್ ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪೂಜಾ ಕಾರ್ಯಕ್ರಮದ ವೇಳೆ, ದರ್ಶನ್‌ಗೋಸ್ಕರ ಪೂಜೆ ಮಾಡಿದರೆ ನಾನು ಇಲ್ಲಿಗೆ ಬರುತ್ತಿರಲಿಲ್ಲ ಎಂದು ಜಗ್ಗೇಶ್ ವಿವಾದಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಪೂಜೆಯಲ್ಲಿ ಸರ್ಪ ಶಾಂತಿ, ಅಶ್ಲೇಷ ಬಲಿ ಸೇರಿದಂತೆ ಹಲವು ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಯಿತು. ಜಗ್ಗೇಶ್ ಅವರು ದರ್ಶನ್ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಈ ಪೂಜೆ ದರ್ಶನ್‌ಗಾಗಿ ಅಲ್ಲ, ಅದು ಚಿತ್ರರಂಗದ ಏಳಿಗೆಗಾಗಿ. ಆದ್ದರಿಂದಲೇ ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ” ಎಂದರು.
ನಾಗಾರಾಧನೆಯ ಸಂದರ್ಭದಲ್ಲಿ ನಾಗದೇವರು ನಮಗೆ ಒಗ್ಗಟ್ಟಾಗಿ ಕೆಲಸ ಮಾಡುವುದಕ್ಕೆ ಉತ್ತೇಜಿಸಿದ್ದಾರೆ ಎಂದು ಜಗ್ಗೇಶ್ ಅಭಿಪ್ರಾಯಪಟ್ಟರು. “ನಾವು ಆಧ್ಯಾತ್ಮಿಕವಾಗಿ ಇದ್ದೇವೆ. ದೇವರನ್ನು ನಂಬುವವರ ಬೆಳವಣಿಗೆ ಹೇಗಿದೆ ಮತ್ತು ನಂಬದಿರುವವರ ಬೆಳವಣಿಗೆ ಹೇಗಿದೆ ನೋಡಿ..” ಎಂದು ಅವರು ಹೇಳಿದರು.