ಸಂಗೀತ ದಿಗ್ಗಜನ ಜೀವನ ತೆರೆಮೇಲೆ! ಯಾವುದು ಸಿನೆಮಾ? ಹೀರೋ ಯಾರು?
“ನಗುವ ನಯನ..”; “ಕೇಳದೆ ನಿಮಗೀಗ ದೂರದಲ್ಲಿ ಯಾರೋ..!”; “ಸ್ವೀಟಿ ನನ್ನ ಜೋಡಿ”; “ಜೊತೆಯಲಿ ಜೊತೆ ಜೊತೆಯಲಿ ಇರುವೆನು..!”; “ನನ್ನ ನೀನು ಗೆಲ್ಲಲಾರೆ.. ತಿಳಿದೂ ತಿಳಿದೂ”!; “ಜೀವ ಹೂವಾಗಿದೆ ಭಾವ ಜೇನಾಗಿದೆ..!”; “ಮುತ್ತು ಮುತ್ತು ನೀರ ಹನಿಯ ತಾಂತನನಂ..”; “ಚಿಕ್ಕಮಗಳೂರ ಚಿಕ್ಕ ಮಲ್ಲಿಗೆ”; “ಹಳ್ಳಿ ಲಾವಣಿಯಲ್ಲಿ ಲಾಲಿ..ಸುವ್ವಲಾಲಿ..”- ಕನ್ನಡದ ಈ ಸೂಪರ್‌ಹಿಟ್ ಹಾಡುಗಳನ್ನು ಕೇಳದವರು ಯಾರು?
ಕನ್ನಡದಲ್ಲಿ ಮಾತ್ರವಲ್ಲ ಇಡೀ ಭಾರತಾದ್ಯಂತ ತಮ್ಮ ಸಂಗೀತದ ಮೂಲಕ ಹೆಸರು ಗಳಿಸಿದವರು ಇಳಯರಾಜಾ..! ಸುಮಾರು 5 ದಶಕಗಳ ಕಾಲ 7000ಕ್ಕೂ ಹೆಚ್ಚು ಚಿತ್ರಗೀತೆಗಳನ್ನು ಸಂಯೋಜಿಸಿರುವ, ದೇಶಾದ್ಯಂತ 20000ಕ್ಕೂ ಹೆಚ್ಚು ಕಾನ್ಸರ್ಟ್‌ಗಳನ್ನು ಪ್ರಸ್ತುತ ಪಡಿಸಿರುವ ಇಳಯಾರಾಜಾ, ಸಂಗೀತ ಲೋಕದಲ್ಲಿ ಅಚ್ಚಳಿಯದ ಹೆಸರು. ಇಂಥ ಸಂಗೀತ ದಿಗ್ಗಜನ ಜೀವನ ಈಗ ತೆರೆ ಮೇಲೆ ಬರೋಕೆ ಸಜ್ಜಾಗಿದೆ..
ಇಳಯರಾಜಾ – ಕಿಂಗ್ ಆಫ್ ಮ್ಯೂಸಿಕ್!
ಸಂಗೀತ ಮಾಂತ್ರಿಕ ಇಳಯರಾಜಾ(Ilaiyaraaja) ಅವರ ಜೀವನ ಚರಿತ್ರೆ ಸಿನೆಮಾ ಆಗಲಿದೆ. ಚಿತ್ರದ ಮೊದಲ ಪೋಸ್ಟರ್ ಮಾ.20ರಂದು ಬಿಡುಗಡೆಯಾಗಿದ್ದು, ಇಳಯರಾಜಾ ಅವರ ಪಾತ್ರದಲ್ಲಿ ನಟ ಧನುಷ್(Dhanush) ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಇಳಯರಾಜಾ – ದಿ ಕಿಂಗ್ ಆಫ್ ಮ್ಯೂಸಿಕ್ ಎಂದು ಹೆಸರಿಡಲಾಗಿದೆ. ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ನಟ ಕಮಲ್ ಹಾಸನ್(Kamal Hasaan) ಈ ಬಯೋಪಿಕ್‌ನ ಮೊದಲ ಪೋಸ್ಟರ್ ಬಿಡುಗಡೆ ಮಾಡಿದರು.
ಕ್ಯಾಪ್ಟನ್ ಮಿಲ್ಲರ್(Captain Miller) ಚಿತ್ರದ ನಿರ್ದೇಶಕ ಅರುಣ್ ಮಾಥೇಶ್ವರನ್ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳಲಿದ್ದಾರೆ. ಕನೆಕ್ಟ್ ಮೀಡಿಯಾ, ಪಿಕೆ ಪ್ರೈಮ್ ಪ್ರೊಡಕ್ಷನ್ ಮತ್ತು ಮೆರ್ಕೂರಿ ಮೂವೀಸ್ ಬಯೋಪಿಕ್ ನಿರ್ಮಾಣದ ಜವಾಬ್ದಾರಿ ಹೊತ್ತಿವೆ. ತಮ್ಮ ಬಯೋಪಿಕ್‌ಗೆ ಸ್ವತಃ ಇಳಯರಾಜಾ ಅವರೇ ಸಂಗೀತ ನಿರ್ದೇಶನ ಮಾಡುತ್ತಾರೆ. ಈ ಚಿತ್ರ ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
“ನನ್ನ ಕನಸು ನನಸಾಗಿದೆ- ನಟ ಧನುಷ್”!
ಇಳಯರಾಜಾ ಅವರ ಹಾಡುಗಳನ್ನು ಕೇಳಿಕೊಂಡು ಬೆಳೆದವನು ನಾನು. ಇಳಯರಾಜಾ ಮತ್ತು ರಜನೀಕಾಂತ್ ಅವರ ಬಯೋಪಿಕ್‌ಗಳಲ್ಲಿ ನಟಿಸಿಬೇಕೆಂದು ನನ್ನ ಕನಸು. ಅದರಲ್ಲಿ ಈಗ ಒಂದು ಫಲಿಸಿದೆ, ಇನ್ನೊಂದು ಯಾವಾಗ ಕೈಗೂಡುವುದೊ ಗೊತ್ತಿಲ್ಲ ಎಂದು ಧನುಷ್ ಹೇಳಿದರು.
ಇದನ್ನೂ ಓದಿ : “IPL 2024 ಇದು ಆರ್ಸಿಬಿ ಹೊಸ ಅಧ್ಯಾಯ”
ಸುಮಾರು 5 ದಶಕಗಳ ಕಾಲ 7000ಕ್ಕೂ ಹೆಚ್ಚು ಚಿತ್ರಗೀತೆಗಳನ್ನು ಸಂಯೋಜಿಸಿರುವ, ದೇಶಾದ್ಯಂತ 20000ಕ್ಕೂ ಹೆಚ್ಚು ಕಾನ್ಸರ್ಟ್‌ಗಳನ್ನು ಪ್ರಸ್ತುತ ಪಡಿಸಿರುವ ಇಳಯಾರಾಜಾ, ಸಂಗೀತ ಲೋಕದಲ್ಲಿ ಅಚ್ಚಳಿಯದ ಹೆಸರು. ಚಲನಚಿತ್ರ ಸಂಯೋಜಕ, ಗಾಯಕ, ಗೀತಸಾಹಿತಿಯಾಗಿ ಪ್ರಸಿದ್ಧಿ. ತಮಿಳು, ಕನ್ನಡ, ಮಲಯಾಳಂ, ತೆಲುಗು, ಹಿಂದಿ ಮತ್ತು ಮರಾಠಿ ಚಿತ್ರರಂಗಗಳಲ್ಲಿ ಸಂಗೀತ ಸಂಯೋಜನೆ, ಗಾಯನ ಮತ್ತು ಗೀತರಚನೆ. ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕರಾದ ಜಿ.ಕೆ. ವೆಂಕಟೇಶ್ ಅವರ ಶಿಷ್ಯರಾಗಿ ಬೆಳೆದ ಇಳಯರಾಜಾ, ಇಂದು ಸಂಗೀತ ಕ್ಷೇತ್ರದ ಮೇರು ಪರ್ವತ. ಇವರ ಜೀವನ, ಪಯಣ ಮತ್ತು ಸಾಧನೆ ಈಗ ಸಿನೆಮಾ ಆಗ್ತಿರೋದು ಸಂಗೀತಪ್ರಿಯರಿಗೆ ರಸದೌತಣ!
ಚಿತ್ರದ ಪೋಸ್ಟರನ್ನು ಹಂಚಿಕೊಂಡು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಇಳಯಾರಾಜಾ, “ನನ್ನ ವೈಯಕ್ತಿಕ ಜೀವನ ಲಕ್ಷಾಂತರ ಸಂಗೀತ ಪ್ರೇಮಿಗಳ ಹೃದಯವನ್ನು ಸ್ಪರ್ಶಿಸುವ ಚಿತ್ರಕಥೆಯಾಗಿ ರೂಪಾಂತರಗೊಳ್ಳುತ್ತಿದೆ. ಚಿತ್ರತಂಡಕ್ಕೆ ಶುಭಹಾರೈಕೆಗಳು..” ಎಂದು ಬರೆದುಕೊಂಡಿದ್ದಾರೆ.