IMDb 2024ರ ಭಾರತದ ಜನಪ್ರಿಯ ಸಿನಿಮಾಗಳು: ದಕ್ಷಿಣ ಭಾರತದ ಈ ಸಿನಿಮಾಗೆ ಸಿಕ್ಕಿದೆ ನಂ.1 ಸ್ಥಾನ..!

ಬೆಂಗಳೂರು: 2024ನೇ ವರ್ಷದ ಅಂತಿಮ ಹಂತದಲ್ಲಿ, ಭಾರತದ ಜನಪ್ರಿಯ ಸಿನಿಮಾಗಳ ಪಟ್ಟಿ IMDb ಪ್ರಕಟಿಸಿದ್ದು, ಈ ಬಾರಿ ಬಾಲಿವುಡ್‌ನ ಹಿಟ್ ಸಿನಿಮಾಗಳನ್ನು ಹಿಂದಿಕ್ಕಿ ದಕ್ಷಿಣ ಭಾರತದ ಬ್ಲಾಕ್‌ಬಸ್ಟರ್ “ಕಲ್ಕಿ 2898 AD” ಮೊದಲ ಸ್ಥಾನವನ್ನು ಪಡೆದಿದೆ. ಈ ಸಿನಿಮಾ ದಕ್ಷಿಣ ಭಾರತ ಅಷ್ಟೇ ಅಲ್ಲದೆ, ಇಡೀ ಜಗತ್ತಿನ ಸಿನಿ ಪ್ರೇಕ್ಷಕರ ಮನ ಗೆದ್ದಿದೆ.
“ಕಲ್ಕಿ 2898 AD” ಚಿತ್ರದ ವಿಶೇಷತೆಯನ್ನು ನಾಗ್ ಅಶ್ವಿನ್ ಹಂಚಿಕೊಂಡಿದ್ದಾರೆ:
ಈ ಬಗ್ಗೆ ನಿರ್ದೇಶಕ ನಾಗ್ ಅಶ್ವಿನ್, “ಈ ಚಿತ್ರ IMDbಯ ಜನಪ್ರಿಯ ಭಾರತದ ಸಿನಿಮಾಗೆ ಆಯ್ಕೆಯಾದುದು ನಿಜಕ್ಕೂ ಹರ್ಷಕರ. ಪ್ರೇಕ್ಷಕರ ಪ್ರೀತಿ ಹಾಗೂ ಬೆಂಬಲವೇ ಈ ಸಾಧನೆಗೆ ಕಾರಣ. ಎಲ್ಲಾ ವಯಸ್ಸಿನವರಿಗೂ ಈ ಸಿನಿಮಾ ಮೆಚ್ಚುಗೆ ಆಗಿದೆ. ಇದು ನಮಗೆ ತುಂಬಾ ಹೃದಯಸ್ಪರ್ಶಿ.” ಎಂದು ಹೇಳಿದರು.
ಘಟಾನುಘಟಿ ನಟರ ಸಮಾಗಮ:
ಪ್ರಭಾಸ್ ಮತ್ತು ದೀಪಿಕಾ ಪಡುಕೋಣ್ ಅಭಿನಯದ “ಕಲ್ಕಿ 2898 AD” ಮೊದಲ ಸ್ಥಾನದಲ್ಲಿದ್ದರೆ, ದೀಪಿಕಾ ಮತ್ತೊಂದು ಹಿಟ್ ಚಿತ್ರ “ಫೈಟರ್” ಹನ್ನೆರಡನೇ ಸ್ಥಾನದಲ್ಲಿದೆ. ರೋಹಿತ್ ಶೆಟ್ಟಿ ನಿರ್ದೇಶನದ “ಸಿಂಘಮ್ ಅಗೆನ್”, ಭೂಲ ಭೂಲೈಯ್ಯ 3 ಹಾಗೂ ಕಾಮಿಡಿ-ಹಾರರ್ ಸಿನಿಮಾ “ಸ್ತ್ರೀ 2” ಈ ಪಟ್ಟಿಯಲ್ಲಿ ಇವೆ.
IMDb 2024 ಜನಪ್ರಿಯ ಟಾಪ್ 10 ಚಿತ್ರಗಳು:
- ಕಲ್ಕಿ 2898 AD
- ಸ್ತ್ರೀ 2
- ಮಹಾರಾಜ
- ಶೈತಾನ್
- ಫೈಟರ್
- ಮಂಜುಮೆಲ್ ಬಾಯ್ಸ್
- ಭೂಲ ಭೂಲೈಯ್ಯ 3
- ಕಿಲ್
- ಸಿಂಘಮ್ ಅಗೆನ್
- ಲಾಪತಾ ಲೇಡೀಸ್