India
ಪ್ರಧಾನಿ ಮೋದಿಗೆ ಭೂತಾನ್ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಭೂತಾನ್: ಭಾರತ ಮತ್ತು ಭೂತಾನ್ ದೇಶಗಳ ನಡುವಿನ ಸ್ನೇಹ ಸಂಬಂಧ ಸ್ವತಂತ್ರ ಪೂರ್ವದಿಂದಲೂ ನಡೆದುಕೊಂಡು ಬಂದಿದೆ. ಭೂತಾನ್ ದೇಶಕ್ಕೆ ಭಾರತ ಆರ್ಥಿಕ ನೆರವು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತನ್ನ ಸಹಾಯ ಹಸ್ತವನ್ನು ಚಾಚಿದೆ.
ಉಭಯ ದೇಶಗಳ ನಡುವಿನ ಸ್ನೇಹ ಸೌಹಾರ್ದತೆಯ ಪ್ರತೀಕವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಭೂತಾನ್ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋ’ವನ್ನು 2024-25 ನೇ ಸಾಲಿನಲ್ಲಿ ನೀಡಲಿದೆ.
“ಭಾರತ ಮತ್ತು ಭೂತಾನ್ ನಡುವೆ ಸಂಪರ್ಕ, ಮೂಲಸೌಕರ್ಯ, ವ್ಯಾಪಾರ ಮತ್ತು ಇಂಧನ ಕ್ಷೇತ್ರಗಳಿಗೆ ಹೊಸ ಸಾಧ್ಯತೆಗಳ ಕುರಿತು ನಾವು ಕೆಲಸ ಮಾಡುತ್ತೇವೆ.” ಎಂದು ಭೂತಾನ್ ರಾಜರಿಗೆ ಪ್ರಶಸ್ತಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವಾಗ ಮೋದಿಯವರು ಈ ಹೇಳಿಕೆಯನ್ನು ನೀಡಿದರು.
ಮೋದಿಯವರು ಈ ಪ್ರಶಸ್ತಿಯನ್ನು ಪಡೆದ ಮೊದಲ ಅಂತರಾಷ್ಟ್ರೀಯ ಮಟ್ಟದ ನಾಯಕರಾಗಿದ್ದಾರೆ.