Sports
ಟಿ-20 ವಿಶ್ವಕಪ್; ಈ ಸಲ ಕಫ್ ನಮ್ಮದೆ.
ಬಾರ್ಬಡೋಸ್: 17 ವರ್ಷಗಳ ನಂತರ ಟಿ-20 ವಿಶ್ವಕಪ್ ಮತ್ತೆ ಮರಳಿ ಭಾರತಕ್ಕೆ ಬಂದಿದೆ. 2007ರಲ್ಲಿ ದೋನಿ ಸಾರಥ್ಯದಲ್ಲಿ ಮೊದಲ ಬಾರಿಗೆ ಭಾರತ ಪಂದ್ಯಾವಳಿಯಲ್ಲಿ ಕಫ್ ಗೆದ್ದಿತ್ತು. ಈಗ ಮತ್ತೆ ವೆಸ್ಟ್ ಇಂಡೀಸ್ ನೆಲದಲ್ಲಿ, ಭಾರತ ತನ್ನ ಎರಡನೇ ಟಿ-20 ವಿಶ್ವಕಪ್ ನ್ನು ಮೂಡಿಗೇರಿಸಿಕೊಂಡಿದೆ.
ರೋಹಿತ್ ಶರ್ಮಾ ಅವರ ದಿಟ್ಟ ನಾಯಕತ್ವಕ್ಕೆ ಇಡೀ ದೇಶವೇ ತಲೆಬಾಗಿದೆ. ವಿರಾಟ್ ಕೊಹ್ಲಿ ಫೈನಲ್ ಪಂದ್ಯದಲ್ಲಿ ಅಬ್ಬರಿಸಿ ರನ್ ಕಲೆ ಹಾಕಿದರು. ಹಾರ್ದಿಕ್ ಪಾಂಡ್ಯ ಅವರು ತಮ್ಮ ಚಾಣಾಕ್ಷ ಕೊನೆಯ ಓವರ್ ನಲ್ಲಿ ಸೌತ್ ಆಫ್ರಿಕವನ್ನು ರನ್ ಕಲೆ ಹಾಕದಂತೆ ಕಟ್ಟು ಹಾಕಿದರು. ಒಟ್ಟಾರೆಯಾಗಿ ತಂಡದ ಎಲ್ಲಾ ಸದಸ್ಯರ ಪರಿಶ್ರಮದಿಂದಾಗಿ ಈ ಬಾರಿಯ ವಿಶ್ವಕಪ್ ಭಾರತದ ಪಾಲಾಯಿತು.
ದೇಶದ ಎಲ್ಲಾ ಗಣ್ಯರಿಂದ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿದೆ. ಅಷ್ಟೇ ಅಲ್ಲದೆ ದೇಶ ವಿದೇಶದ ಕ್ರಿಕೆಟ್ ದಿಗ್ಗಜರು ಕೂಡ ಭಾರತ ತಂಡಕ್ಕೆ ಶಹಬ್ಬಾಸ್ ಎಂದಿದ್ದಾರೆ.