Sports
ಪಂಜಾಬ್ ಕಿಂಗ್ಸ್ ವಿರುದ್ಧ ಕಣಕ್ಕಿಳಿಯಲಿದ್ದಾರೆ ಎಲ್‌ಎಸ್‌ಜಿ.

ಲಕ್ನೋ: ಇಂದು ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಆವೃತ್ತಿಯ 11ನೇ ಪಂದ್ಯ. ಲಕ್ನೋ ಸೂಪರ್ ಜಾಯಿಂಟ್ಸ್ ವಿರುದ್ಧ ತೊಡೆತಟ್ಟಲಿದೆ ಪಂಜಾಬ್ ಕಿಂಗ್ಸ್. ಲಕ್ನೋದ ಏಕಾನಾ ಕ್ರೀಡಾಂಗಣ ಈ ಎರಡು ತಂಡಗಳ ಹಣಾಹಣಿಗೆ ಸಾಕ್ಷಿಯಾಗಲಿದೆ.
ತನ್ನ ಹಿಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ 20 ರನ್ಗಳ ಸೋಲನ್ನು ಅನುಭವಿಸಿರುವ ಲಕ್ನೋ ಸೂಪರ್ ಜಾಯಿಂಟ್ಸ್, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಈಗಾಗಲೇ ಎರಡು ಪಂದ್ಯಗಳನ್ನು ಆಡಿರುವ ಪಂಜಾಬ್ ಕಿಂಗ್ಸ್ ತಂಡ, ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದೆ. ತನ್ನ ಹಿಂದಿನ ಪಂದ್ಯದಲ್ಲಿ ಆರ್‌ಸಿಬಿ ತಂಡದ ವಿರುದ್ಧ ಬೆಂಗಳೂರಿನಲ್ಲಿ ಸೋಲನ್ನು ಅನುಭವಿಸಿದೆ.
ತನ್ನ ತವರಲ್ಲಿ ಈ ಪಂದ್ಯ ಆಡುತ್ತಿರುವ ಲಕ್ನೋ ಸೂಪರ್ ಜಾಯಿಂಟ್ಸ್ ತಂಡ, ಅಭಿಮಾನಿಗಳ ಬೆಂಬಲ ಇಂದು ಸಾಕಷ್ಟು ಪಡೆಯಲಿದ್ದಾರೆ. ಆದರೆ, ಯಾರು ಇಂದಿನ ಪಂದ್ಯ ಗೆಲ್ಲಲಿದ್ದಾರೆ ಎಂದು ಕಾದು ನೋಡಬೇಕಾಗಿದೆ.