Bengaluru

ರಾಜ್ಯದಲ್ಲಿ ಹೆಚ್ಚಾಗುತ್ತಿದೆ ರೈತರ ಆತ್ಮಹತ್ಯೆ! ಹೊರಬಂದಿದೆ ಆತಂಕಕಾರಿ ಮಾಹಿತಿ.

ಬೆಂಗಳೂರು: ರಾಜ್ಯದ ಜನರು ಆತಂಕ ಪಡುವ ಸಂಗತಿ ಇದೀಗ ಹೊರ ಬಂದಿದೆ. ಕರ್ನಾಟಕ ರಾಜ್ಯ ಕೇವಲ 15 ತಿಂಗಳಲ್ಲಿ, ಬರೋಬ್ಬರಿ 1,182 ರೈತರ ಆತ್ಮಹತ್ಯೆಯನ್ನು ಕಂಡಿದೆ. ರಾಜ್ಯದ ಹಾಗೂ ದೇಶದ ಜನರ ಹಸಿವನ್ನು ನೀಗಿಸುವ ಅನ್ನದಾತ, ಈ ರೀತಿ ಆತ್ಮಹತ್ಯೆ ಮಾಡಿಕೊಂಡರೆ ದೇಶದ ಭವಿಷ್ಯದ ಕುರಿತು ಚಿಂತಿಸುವ ಅಗತ್ಯ ಉಂಟಾಗುತ್ತದೆ.

ತೀವ್ರ ಬರ, ಬೆಳೆ ಹಾನಿ, ಸಾಲದ ಹೊರೆ, ಈ ರೀತಿಯಾದ ಹತ್ತು ಹಲವು ಕಾರಣಗಳಿಂದಾಗಿ 2023 ಏಪ್ರಿಲ್ 1ರಿಂದ 2024 ಜುಲೈ 4ರೊಳಗೆ ಒಟ್ಟು 1,182 ರೈತರು ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

  • ಬೀದರ್- 36
  • ಕಲಬುರ್ಗಿ- 69
  • ಯಾದಗಿರಿ- 68
  • ವಿಜಯಪುರ- 57
  • ಬೆಳಗಾವಿ- 122
  • ಬಾಗಲಕೋಟೆ- 19
  • ರಾಯಚೂರು- 18
  • ಉತ್ತರ ಕನ್ನಡ- 6
  • ಧಾರವಾಡ- 101
  • ಗದಗ- 32
  • ಕೊಪ್ಪಳ- 30
  • ವಿಜಯನಗರ- 37
  • ಬಳ್ಳಾರಿ- 19
  • ಹಾವೇರಿ- 120
  • ಶಿವಮೊಗ್ಗ- 66
  • ದಕ್ಷಿಣ ಕನ್ನಡ- 6
  • ಚಿಕ್ಕಮಗಳೂರು- 89
  • ದಾವಣಗೆರೆ- 43
  • ಚಿತ್ರದುರ್ಗ- 36
  • ತುಮಕೂರು- 22
  • ಹಾಸನ- 47
  • ಕೊಡಗು- 6
  • ಮೈಸೂರು- 74
  • ಮಂಡ್ಯ- 45
  • ಚಾಮರಾಜನಗರ- 2
  • ಚಿಕ್ಕಬಳ್ಳಾಪುರ- 2
  • ಬೆಂಗಳೂರಿನ ನಗರ- 1
  • ರಾಮನಗರ- 9

ಇದು ಜಿಲ್ಲಾವಾರು ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಅಂಕಿ ಅಂಶವಾಗಿದೆ.

Show More

Leave a Reply

Your email address will not be published. Required fields are marked *

Related Articles

Back to top button