Politics
ಕರುಣಾನಿಧಿ ಅವರ ಜನ್ಮದಿನದಂದು ಗೌರವ ಸೂಚಿಸಿದ ಮೋದಿಜಿ.

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ. ಶ್ರೀ. ಕರುಣಾನಿಧಿ ಅವರ 100ನೇ ಜನ್ಮದಿನವನ್ನು ಇಂದು ಆಚರಿಸಲಾಯಿತು. ಕರುಣಾನಿಧಿಯವರು ಈ.ವಿ. ರಾಮಸ್ವಾಮಿ ಅಂದರೆ ಪೆರಿಯಾರ್ ಅವರ ಪರಮ ಶಿಷ್ಯರು. ಅವರ ಹಾದಿಯಲಿ ನಡೆದು ತಮಿಳು ಪ್ರಾದೇಶಿಕ ಪಕ್ಷವಾದ ‘ಡಿಎಂಕೆ’ ಪಕ್ಷವನ್ನು ಕಟ್ಟಿ ಬೆಳೆಸಿದರು.
ಕರುಣಾನಿಧಿ ಅವರ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಎಕ್ಸ್ ಖಾತೆಯ ಮೂಲಕ ಗೌರವ ಸೂಚಿಸಿದ್ದಾರೆ. “ಕಲೈಂಜರ್ ಕರುಣಾನಿಧಿ ಜೀ ಅವರ 100 ನೇ ಜನ್ಮದಿನದಂದು ನಾನು ಅವರಿಗೆ ಗೌರವ ಸಲ್ಲಿಸುತ್ತೇನೆ. ಸಾರ್ವಜನಿಕ ಜೀವನದಲ್ಲಿ ಅವರ ಸುದೀರ್ಘ ವರ್ಷಗಳಲ್ಲಿ, ಅವರು ತಮಿಳುನಾಡು ಮತ್ತು ತಮಿಳು ಜನರ ಅಭಿವೃದ್ಧಿಗೆ ಶ್ರಮಿಸಿದರು. ಅವರ ಪಾಂಡಿತ್ಯಪೂರ್ಣ ಸ್ವಭಾವಕ್ಕಾಗಿ ಅವರು ವ್ಯಾಪಕವಾಗಿ ಗೌರವಿಸಲ್ಪಟ್ಟಿದ್ದಾರೆ. ನಾವಿಬ್ಬರೂ ಆಯಾ ರಾಜ್ಯಗಳ ಮುಖ್ಯಮಂತ್ರಿಗಳಾಗಿದ್ದಾಗ ಅವರೊಂದಿಗಿನ ನನ್ನ ಹಲವಾರು ಸಂವಾದಗಳನ್ನು ನಾನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ.” ಎಂದು ಹೇಳಿಕೊಂಡಿದ್ದಾರೆ.