ಮತ್ತೆ ರಿಲೀಸ್ ಆಗ್ತಿದೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಚಿತ್ರ: ವಿಧ್ಯಾರ್ಥಿಗಳಿಗೆ 50% ರಿಯಾಯಿತಿ..!

ಬೆಂಗಳೂರು: ಹದಿನೆಂಟನೇ ಶತಮಾನದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸಾಹಸಗಾಥೆಯನ್ನು ಮತ್ತೆ ಆಸ್ವಾದಿಸಲು ಕನ್ನಡಿಗರಿಗೆ ಅವಕಾಶ ಲಭಿಸಿದೆ. 2012ರಲ್ಲಿ ಪ್ರಾರಂಭದಲ್ಲಿ ಬಿಡುಗಡೆಯಾಗಿ ದರ್ಶನ್ ಅಭಿಮಾನಿಗಳ ಹೃದಯ ಗೆದ್ದ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಇದೀಗ ಆಧುನಿಕ ತಂತ್ರಜ್ಞಾನದ ಸ್ಪರ್ಶದೊಂದಿಗೆ ನವೆಂಬರ್ 22ರಂದು ರಾಜ್ಯಾದ್ಯಂತ ಮರುಬಿಡುಗಡೆಯಾಗುತ್ತಿದೆ.
ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಂಗೊಳ್ಳಿ ರಾಯಣ್ಣನ ಪಾತ್ರದಲ್ಲಿ ಜೀವ ತುಂಬಿದ್ದು, ಹಿರಿಯ ನಟಿ ಜಯಪ್ರದ ಅವರು ಕಿತ್ತೂರು ರಾಣಿ ಚನ್ನಮ್ಮನ ಪಾತ್ರದಲ್ಲಿ ಕಂಗೊಳಿಸಿದ್ದಾರೆ. ಕಿಚ್ಚ ಸುದೀಪ್ ಅವರ ನಿರೂಪಣೆ ಈ ಚಿತ್ರಕ್ಕೆ ಮತ್ತಷ್ಟು ಭಾವುಕತೆಯನ್ನು ನೀಡಿತ್ತು.
ಮರುಬಿಡುಗಡೆಯ ವಿಶೇಷತೆಗಳು:
- ಹೊಸ ಆಧುನಿಕ ತಂತ್ರಜ್ಞಾನದ ಬಳಕೆ ಚಿತ್ರಕಥೆಯನ್ನು ಮತ್ತಷ್ಟು ಸಜೀವಗೊಳಿಸಿದೆ.
- ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ 50% ರಿಯಾಯಿತಿ.
- ಚಿತ್ರವನ್ನು ಎಸ್.ಜಿ.ಕೆ. ಫಿಲ್ಮ್ಸ್ ಮೂಲಕ ಕೆ. ಬಸವರಾಜ್ ಅವರು ಮರುಬಿಡುಗಡೆ ಮಾಡುತ್ತಿದ್ದಾರೆ.
ತಂತ್ರಜ್ಞಾನದ ಹೊಸ ಪ್ರಯೋಗ:
ರಮೇಶ್ ಬಾಬು ಅವರ ಛಾಯಾಗ್ರಹಣ ಮತ್ತು ಯಶೋವರ್ಧನ್-ಹರಿಕೃಷ್ಣ ಅವರ ಸಂಗೀತ ಈ ಚಿತ್ರವನ್ನು ಕಲಾತ್ಮಕ ದೃಷ್ಟಿಯಿಂದ ಶ್ರೇಷ್ಟ ಮಾಡುತ್ತಿದೆ. ಪಳನಿರಾಜ್ ಮತ್ತು ರವಿವರ್ಮ ಅವರ ಸಾಹಸ ದೃಶ್ಯಗಳು ಹಳೆಯ ಚರಿತ್ರೆಗೆ ಹೊಸ ಶಕ್ತಿ ತುಂಬಲಿವೆ.
ಅಭಿಮಾನಿಗಳಿಗೆ ವಿಶೇಷ ಉಡುಗೊರೆ:
ದರ್ಶನ್ ಅಭಿಮಾನಿಗಳಿಗಾಗಿ ಈ ಚಿತ್ರ ಮತ್ತೊಮ್ಮೆ ಹಬ್ಬದ ಸಂಭ್ರಮ ತಂದಿದೆ. ರಾಯಣ್ಣನ ಗಾಥೆಯನ್ನು ಈ ತಂತ್ರಜ್ಞಾನದ ಹೊಸತಾದ ಆವೃತ್ತಿಯಲ್ಲಿ ನೋಡಿ ಕನ್ನಡ ಅಭಿಮಾನಿಗಳು ಕಣ್ತುಂಬಿಕೊಳ್ಳಲು ಸಜ್ಜಾಗಿರಿ.