BengaluruKarnataka

ಕುರುಕ್ಷೇತ್ರ ಪುಸ್ತಕ ಲೋಕಾರ್ಪಣೆ: ಜಗದೀಶ ಶರ್ಮಾ ಸಂಪ ಅವರ ಹೊಸ ಕೃತಿ ಮಾರ್ಚ್ 9ಕ್ಕೆ ಬಿಡುಗಡೆ!

ಬೆಂಗಳೂರು: ಸಾಹಿತ್ಯಾಸಕ್ತರಿಗೆ ಸಿಹಿ ಸುದ್ದಿ! ಲೇಖಕ ಮತ್ತು ವಿದ್ವಾಂಸರಾದ ಜಗದೀಶ ಶರ್ಮಾ ಸಂಪ (Jagadish Sharma Sampa) ಅವರ ಬಹುನಿರೀಕ್ಷಿತ ಪುಸ್ತಕ “ಕುರುಕ್ಷೇತ್ರ” ಬಿಡುಗಡೆಗೆ (Kurukshetra Book Launch) ಸಜ್ಜಾಗಿದೆ. ಜಮೀಲ್‌ ಸಾವಣ್ಣ ಒಡೆತನದ ಸಾವಣ್ಣ ಪ್ರಕಾಶನದ ವತಿಯಿಂದ ಗೌರೀಶ್‌ ಅಕ್ಕಿ ಸ್ಟುಡಿಯೋ ಸಹಯೋಗದಲ್ಲಿ ಈ ಕೃತಿ ಲೋಕಾರ್ಪಣೆಯಾಗಲಿದೆ. ದಿನಾಂಕ ಮಾರ್ಚ್ 9, 2025 ರಂದು ಭಾನುವಾರ, ವಾಡಿಯಾ ಸಭಾಂಗಣ, ಬಸವನಗುಡಿ ಬೆಂಗಳೂರಿನಲ್ಲಿ ಈ ಸಮಾರಂಭ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭ. ಖ್ಯಾತ ಪತ್ರಕರ್ತರು ಮತ್ತು ಗೌರೀಶ್ ಅಕ್ಕಿ ಸ್ಟುಡಿಯೋ ಸಂಸ್ಥಾಪಕರಾದ ಶ್ರೀ ಗೌರೀಶ್ ಅಕ್ಕಿ, ಪ್ರಸಿದ್ಧ ಸಾಹಿತಿ ಡಾ. ಗಜಾನನ ಶರ್ಮ ಹಾಗೂ ಪುಸ್ತಕದ ಲೇಖಕರಾದ ಶ್ರೀ ಜಗದೀಶ ಶರ್ಮಾ ಸಂಪ ಉಪಸ್ಥಿತರಿರುವರು.

Kurukshetra Book Launch Jagadish Sharma Sampa

ಕಾರ್ಯಕ್ರಮದ ವಿಶೇಷತೆಗಳು:

ಕಾರ್ಯಕ್ರಮದಲ್ಲಿ (Kurukshetra Book Launch) ಭಾಗವಹಿಸುವವರು ಲೇಖಕ ಶ್ರೀ ಜಗದೀಶ ಶರ್ಮಾ ಸಂಪ (Jagadish Sharma Sampa) ಮತ್ತು ಶ್ರೀ ಗೌರೀಶ್ ಅಕ್ಕಿ ಅವರೊಂದಿಗೆ ನೇರವಾಗಿ ಸಂವಾದ ನಡೆಸಬಹುದು, ಮಹಾಭಾರತವನ್ನು ಕುರಿತ ಯಾವುದೇ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಬಹುದು, ಸೆಲ್ಫಿ ತೆಗೆದುಕೊಳ್ಳಬಹುದು, ಪುಸ್ತಕಗಳನ್ನು ಖರೀದಿಸಬಹುದು ಮತ್ತು ಪುಸ್ತಕಗಳಿಗೆ ಹಸ್ತಾಕ್ಷರ ಪಡೆಯಬಹುದು

‘ಕುರುಕ್ಷೇತ್ರ’ (Kurukshetra Book Launch) ಪುಸ್ತಕದ ಮುಖ್ಯಾಂಶ:

18 ದಿನಗಳ ಯುದ್ಧ; 18 ಅಕ್ಷೋಹಿಣೀ ಸೈನ್ಯ, ಅತಿರಥ ಮಹಾರಥರ ಘನೋಪಸ್ಥಿತಿ. ಐದು ತಲೆಮಾರಿನ ಯೋಧರ ಸಮ್ಮಿಲನ. ಕೋಟ್ಯಂತರ ಜೀವಬಲಿ. ಕೊನೆಗೆ ಉಳಿದಿದ್ದು ಬೆರಳೆಣಿಕೆಯ ಜನರಷ್ಟೇ. ಇದು ಕುರುಕ್ಷೇತ್ರದ ಯುದ್ಧದ ಕಥೆ. ಧರ್ಮಕ್ಷೇತ್ರದಲ್ಲಿ ಧರ್ಮರಕ್ಷೆಗಾಗಿ ನಡೆದ ಈ ಮಹಾಯುದ್ಧ ವಾಸ್ತವವಾಗಿ ನಡೆದಿದ್ದು ಹೇಗೆ? ಏನೆಲ್ಲಾ ಘಟನೆಗಳು ಸಂಭವಿಸಿದವು? ಕುರುಕ್ಷೇತ್ರ ಯುದ್ಧದ ಕ್ಷಣಕ್ಷಣದ ಮಾಹಿತಿ ಒಳಗೊಂಡ ಕೃತಿ ಇದು.
“ಮಹಾಭಾರತ ಹೇಳಿಯೂ ಹೇಳದ್ದು”, “ಭೀಷ್ಮ ಹೇಳಿದ ಮ್ಯಾನೇಜ್‌ಮೆಂಟ್‌ ಕಥೆಗಳು”, “ವಿದುರ”, “ಕುಂತಿ ಪಾಂಡು” – ಸಾವಣ್ಣ ಪ್ರಕಟಣೆಯ ಜಗದೀಶ ಶರ್ಮಾ ಸಂಪರ ಇತರ ಪ್ರಮುಖ ಕೃತಿಗಳು

ಜಗದೀಶ ಶರ್ಮಾ ಸಂಪ (Jagadish Sharma Sampa) ಅವರ ವೆಬ್‌ಸೈಟ್‌ಗೆ ಭೇಟಿಕೊಡಿ:
https://authorsampa.com/

ಮಹಾಭಾರತದ ರಹಸ್ಯಗಳು ಹಾಗೂ ವಿದ್ವಾನ್ ಜಗದೀಶ ಶರ್ಮಾ ಸಂಪ:

ಗೌರೀಶ್‌ ಅಕ್ಕಿ ಸ್ಟುಡಿಯೋ ಯೂಟ್ಯೂಬ್‌ ಚಾನೆಲ್‌ ಪ್ರಸ್ತುತ ಪಡಿಸುವ “ಮಹಾಭಾರತದ ರಹಸ್ಯಗಳು” ಸರಣಿ ಕಾರ್ಯಕ್ರಮ ಈಗಾಗಲೇ ಜನಪ್ರಿಯವಾಗಿದ್ದು, ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದೆ. ಬರೋಬ್ಬರಿ 400ಕ್ಕೂ ಹೆಚ್ಚು ಸಂಚಿಕೆಗಳನ್ನು ಮೀರಿ ಹಲವು ಮೈಲಿಗಲ್ಲುಗಳನ್ನು ದಾಟಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ತಮ್ಮ ವಿವರಣೆ, ವಿಶ್ಲೇಷಣೆಯಿಂದ ಜಗದೀಶ ಶರ್ಮಾ ಸಂಪ (Jagadish Sharma Sampa) ವೀಕ್ಷಕರ ಮನಗೆದ್ದಿದ್ದಾರೆ. https://www.youtube.com/playlist?list=PLfc_wzS9UjPwh4jW4px8TZ-WfHqMsxcKW

ಸಾಹಿತ್ಯಸಾಕ್ತರು, ಪುಸ್ತಕ ಪ್ರಿಯರು ಈ ವಿಶೇಷ ಕಾರ್ಯಕ್ರಮದಲ್ಲಿ (Kurukshetra Book Launch) ತಪ್ಪದೇ ಪಾಲ್ಗೊಳ್ಳಿ

ದಿನಾಂಕ : ಮಾರ್ಚ್‌ 9, 2025 ಭಾನುವಾರ
ಸಮಯ : ಬೆಳಗ್ಗೆ 10:00ಗಂಟೆಗೆ
ಸ್ಥಳ: ಬಿ.ಪಿ. ವಾಡಿಯಾ ಸಭಾಂಗಣ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ(Indian Institute of World Culture), ಬಿ.ಪಿ. ವಾಡಿಯಾ ರಸ್ತೆ ಬಸವನಗುಡಿ, ಬೆಂಗಳೂರು.

Que Prachara

🚀 ನಿಮ್ಮ ಬ್ರ್ಯಾಂಡ್ ಗೆ ಡಿಜಿಟಲ್ ಬೂಸ್ಟ್ ನೀಡಿ! Que Prachara ಜೊತೆ ನಿಮ್ಮ ವ್ಯವಹಾರವನ್ನು ಮತ್ತಷ್ಟು ಬೆಳೆಸಿಕೊಳ್ಳಿ. ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ! 👉 Que Prachara

Gaurish Akki Studio

🎥 ಅಪ್ರತಿಮ ಕಥೆಗಳ ಮಂತ್ರ! ವೈಶಿಷ್ಟ್ಯಪೂರ್ಣ ಸಂದರ್ಶನಗಳು, ಆಕರ್ಷಕ ಡಾಕ್ಯುಮೆಂಟರಿಗಳು, ಮತ್ತು ಆಳವಾದ ಚರ್ಚೆಗಳಿಗೆ Gaurish Akki Studio ಗೆ ಭೇಟಿ ನೀಡಿ. ಸಬ್ ಸ್ಕ್ರೈಬ್ ಮಾಡಿ! 👉 Gaurish Akki Studio

Alma Media School

📢 ನಿಮ್ಮ ಮಾಧ್ಯಮ ಆಸಕ್ತಿಯನ್ನು ವೃತ್ತಿಯಾಗಿ ಮಾರ್ಪಡಿಸಿ! ಪ್ರಾಯೋಗಿಕ ಪತ್ರಿಕೋದ್ಯಮ ಮತ್ತು ಮಾಧ್ಯಮ ತರಬೇತಿಗಾಗಿ Alma Media School ಗೆ ಸೇರಿ. ಇಂದುಲೇ ನೋಂದಾಯಿಸಿ! 👉 Alma Media School

Akey News

📰 ನಿಖರ ಮತ್ತು ನಿಷ್ಪಕ್ಷಪಾತ ಸುದ್ದಿಗಳು! ವಿಶ್ವಾಸಾರ್ಹ ಹಾಗೂ ಆಳವಾದ ಸುದ್ದಿಗಾಗಿ Akey News ನೋಡಿ. ಇನ್ನೂ ಹೆಚ್ಚು ಓದಿ! 👉 Akey News

Show More

Related Articles

Leave a Reply

Your email address will not be published. Required fields are marked *

Back to top button