IndiaPolitics

ಎಲ್‌ಪಿ‌ಜಿ ಗ್ಯಾಸ್ ಇನ್ನು ಅಗ್ಗ. ಹೊಸ ದರದ ಬಗ್ಗೆ ಇಲ್ಲಿ ತಿಳಿಯಿರಿ.

ನವದೆಹಲಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲಿಯೇ ಕೇಂದ್ರ ಸರ್ಕಾರ ಇನ್ನೊಂದು ಮಹತ್ತರವಾದ ನಿರ್ಣಯವನ್ನು ಕೈಗೊಂಡಿದೆ. ಕೇಂದ್ರ ಸರ್ಕಾರ 19 ಕಿಲೋ ಗ್ರಾಂನ ಕಮರ್ಷಿಯಲ್ ಗ್ಯಾಸ್ ಹಾಗೂ 5 ಕಿಲೋ ಗ್ರಾಂನ ಎಫ್‌ಟಿ‌ಎಲ್ ಸಿಲಿಂಡರ್‌ಗಳ ದರ ಕಡಿತಗೊಳಿಸಿದೆ.

19 ಕೆ.ಜಿಯ ಕಮರ್ಷಿಯಲ್ ಸಿಲೆಂಡರ್ ಗಳ ದರವನ್ನು ₹30.50 ಗಳಷ್ಟು ಕಡಿತಗೊಳಿಸಲಾಗಿದೆ. ಈಗ ಇದರ ದರ ₹1764.50 ಆಗಿದೆ. ಹಾಗೆಯೇ, 5 ಕೆ.ಜಿಯ ಎಫ್‌ಟಿ‌ಎಲ್ ದರ ₹7.50 ರಷ್ಟು ಇಳಿಕೆ ಕಂಡಿದೆ.

ಜೆಟ್ ಇಂಧನ ಅಥವಾ ಎಟಿಎಫ್ ಬೆಲೆಯನ್ನು ಸಹ ಶೇಕಡಾ 0.5 ರಷ್ಟು ಕಡಿಮೆ ಮಾಡಲಾಗಿದೆ. ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ಏವಿಯೇಷನ್ ಟರ್ಬೈನ್ ಇಂಧನ (ಎಟಿಎಫ್) ಬೆಲೆಯನ್ನು ಪ್ರತಿ ಕಿಲೋಲೀಟರ್‌ಗೆ ₹502.91 ಅಥವಾ ಶೇಕಡಾ 0.49 ರಷ್ಟು ಕಡಿತಗೊಳಿಸಲಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಕಿಲೋಗೆ ₹100,893.63 ಕ್ಕೆ ತಲುಪಿದೆ.

Show More

Leave a Reply

Your email address will not be published. Required fields are marked *

Related Articles

Back to top button