ಬಾಂಗ್ಲಾದೇಶಿ ಹಿಂದೂಗಳ ಮಾರಣಹೋಮ: ಹಿಂಸಾಚಾರ ಖಂಡಿಸಿದ ವಿಶ್ವಸಂಸ್ಥೆ
ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ದಾಳಿಗಳನ್ನು ವಿಶ್ವಸಂಸ್ಥೆ ತೀವ್ರವಾಗಿ ಖಂಡಿಸಿದೆ. ಬಾಂಗ್ಲಾದೇಶದಲ್ಲಿ ಹಿಂಸಾತ್ಮಕ ಘಟನೆಯುಗಳು ಹೆಚ್ಚುತ್ತಿರುವ ಸಂದರ್ಭಗಳಲ್ಲಿ, ಯುಎನ್ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಅವರು ಯಾವುದೇ ರೀತಿಯ ಪ್ರಜ್ಞಾಪೂರ್ವಕ ದಾಳಿ ಅಥವಾ ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಕೃತ್ಯಗಳನ್ನು ವಿರೋಧಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ದಾಳಿಗಳು ವೇಗವಾಗಿ ಹೆಚ್ಚುತ್ತಿದ್ದು, ಸಾವಿರಾರು ಹಿಂದೂಗಳು ದೇಶವನ್ನು ತೊರೆದು ಭಾರತದತ್ತ ಪ್ರಾಣ ಉಳಿಸಿಕೊಳ್ಳಲು ಹೊರಟಿದ್ದಾರೆ. ಈ ಹಿಂಸಾತ್ಮಕ ಘಟನೆಯುಗಳು ಬಾಂಗ್ಲಾದೇಶದಲ್ಲಿ ತೀವ್ರವಾದ ಸರ್ಕಾರ ವಿರೋಧಿ ಪ್ರತಿಭಟನೆಗಳ ನಡುವೆ ಉಲ್ಬಣವಾಗಿದೆ.
ಅನೇಕ ಆನ್‌ಲೈನ್ ವೀಡಿಯೊಗಳಲ್ಲಿ ದೇವಸ್ಥಾನಗಳನ್ನು ಸುಟ್ಟುಹಾಕಲಾಗುತ್ತಿರುವುದು, ಹಿಂದೂಗಳ ಮನೆ ಮತ್ತು ಹಿಂದೂ ವ್ಯಾಪಾರಸ್ಥಳಗಳನ್ನು ದಾಳಿ ಮಾಡಲಾಗುತ್ತಿರುವುದು ತೋರಿಸಲಾಗಿದೆ. ಖುಲ್ನಾ ವಿಭಾಗದ ಮೆಹೆರ್ಪುರದಲ್ಲಿರುವ ಇಸ್ಕಾನ್ ದೇವಸ್ಥಾನ ಮತ್ತು ಕಾಳಿ ದೇವಸ್ಥಾನವನ್ನೂ ಸಹ ನಾಶಪಡಿಸಿ, ಬೆಂಕಿ ಹಚ್ಚಲಾಗಿದೆ. ಪ್ರಗತಿಪರ ಚಿಂತಕರು ಈ ಘಟನೆಯ ಕುರಿತು ಬಾಯಿ ಬಿಡದೆ ಇರುವುದು ದುರಂತದ ಸಂಕೇತವಾಗಿದೆ.