ನಾಳೆ ಕೇಂದ್ರ ಬಜೆಟ್ ಮಂಡನೆ ಕುರಿತು ಮೋದಿ ಮಾತು; 2047 ಕ್ಕೆ ಭಾರತ ಹೇಗಾಗಲಿದೆ ವಿಕಸಿತ ದೇಶ?

ನವದೆಹಲಿ: ಜುಲೈ 23 2024 ರಂದು, ಮೋದಿಯವರ ಮೂರನೇ ಅವಧಿಯ ಎನ್‌ಡಿಎ ಸರ್ಕಾರ ತನ್ನ ಬಜೆಟ್ -2024 ನ್ನು ಮಂಡನೆ ಮಾಡಲಿದೆ. 60 ವರ್ಷಗಳ ಬಳಿಕ ಒಂದು ಸರ್ಕಾರ, ಯಾವುದೇ ಅಡೆತಡೆ ಇಲ್ಲದೆ, ಸತತ ಮೂರನೇ ಬಾರಿಗೆ ಬಜೆಟ್ ಮಂಡಿಸುತ್ತಿದೆ. ಇದರ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಕ್ರಿಯಿಸಿ, 2024ರ ಬಜೆಟ್ಟನ್ನು 2047 ರ ವಿಕಸಿತ ಭಾರತಕ್ಕಾಗಿ ಹೂಡಲಾಗುವ ಬುನಾದಿ ಎಂದು ಹೇಳಿದ್ದಾರೆ. ದೇಶದ ಅಭಿವೃದ್ಧಿ ಮತ್ತು ಆರ್ಥಿಕತೆ ವಿಕಾಸ ಹೊಂದುವ ಸಕಾರಾತ್ಮಕ ಬೆಳವಣಿಗೆಗೆ ಮೋದಿಯವರು ಹೆಮ್ಮೆ ಪಟ್ಟರು.
“60 ವರ್ಷಗಳ ನಂತರ ಮೂರನೇ ಬಾರಿಗೆ ಸರ್ಕಾರ ಅಧಿಕಾರಕ್ಕೆ ಬಂದಿರುವುದು ಹೆಮ್ಮೆಯ ವಿಷಯ ಮತ್ತು ಮೂರನೇ ಬಾರಿಯ ಮೊದಲ ಬಜೆಟ್ ಅನ್ನು ನಾವು ಮಂಡಿಸುತ್ತಿದ್ದೇವೆ … ನಾನು ದೇಶದ ಜನರಿಗೆ ಭರವಸೆಗಳನ್ನು ನೀಡುತ್ತಿದ್ದೇನೆ ಮತ್ತು ಅದು ನಮ್ಮ ಧ್ಯೇಯ ಕೂಡ ಆಗಿದೆ. ಈ ಬಜೆಟ್ ಅಮೃತ್ ಕಾಲದ ಪ್ರಮುಖ ಬಜೆಟ್ ಆಗಿದ್ದು, ಮುಂದಿನ 5 ವರ್ಷಗಳ ಅವಧಿಗೆ ಈ ಬಜೆಟ್ ನಮ್ಮ ಕನಸಿನ ‘ವಿಕಸಿತ ಭಾರತ’ಗೆ ಭದ್ರ ಬುನಾದಿಯಾಗಲಿದೆ.
ದೊಡ್ಡ ಆರ್ಥಿಕತೆ ಹೊಂದಿರುವ ದೇಶಗಳ ಪೈಕಿ ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಕಳೆದ 3 ವರ್ಷಗಳಲ್ಲಿ, ನಾವು 8% ರಷ್ಟು ನಿರಂತರ ಬೆಳವಣಿಗೆಯೊಂದಿಗೆ ಮುನ್ನಡೆಯುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಬಜೆಟ್‌ಗೆ ಮುಂಚಿತವಾಗಿ ಹೇಳಿದರು.
ಇಂದು ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು 2023-24 ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ದೇಶದ ಮುಂದೆ ಇಡಲಿದ್ದಾರೆ. ಈ ಸಮೀಕ್ಷೆಯು ದೇಶದ ಮುಖ್ಯ ಆರ್ಥಿಕ ಸಲಹೆಗಾರರ ಮಾರ್ಗದರ್ಶನದ ಅಡಿಯಲ್ಲಿ ಮಾಡಲಾಗಿರುತ್ತದೆ.