ಟರ್ಮಿನಲ್ ನಿಗಮದಲ್ಲಿ ಹಣ ದುರ್ಬಳಕೆ ಪ್ರಕರಣ; ಬಿಜೆಪಿಯ ಮಾಜಿ ಎಮ್ಎಲ್‌ಸಿ ಬಂಧನ.

ಬೆಂಗಳೂರು: ರಾಜ್ಯ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ, ಡಿ ದೇವರಾಜ ಅರಸು ಟ್ರಾಕ್ಟರ್ ಮಿನಲ್ ಲಿಮಿಟೆಡ್ ನಿಗಮದಲ್ಲಿ ಭಾರಿ ಪ್ರಮಾಣದ ಅವ್ಯವಹಾರ ಇಂದು ಬೆಳಕಿಗೆ ಬಂದಿದೆ. ನಿಗಮದಲ್ಲಿ ಬರೋಬ್ಬರಿ 47.10 ಕೋಟಿ ರೂಪಾಯಿಗಳ ದುರ್ಬಳಕೆ ಆಗಿದೆ ಎಂಬ ಆರೋಪದ ಮೇಲೆ, ಬಿಜೆಪಿ ಮಾಜಿ ಎಂಎಲ್‌ಸಿ ಡಿ.ಎಸ್. ವೀರಯ್ಯ ಅವರನ್ನು ಸಿಐಡಿ ಪೊಲೀಸರು ಬಂಧನ ಮಾಡಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಆಡಳಿತದಲ್ಲಿದ್ದಾಗ, ವೀರಯ್ಯನವರು ಡಿಡಿಯುಟಿಟಿಎಲ್ ನಿಗಮದ ಅಧ್ಯಕ್ಷರಾಗಿದ್ದರು, ಈ ಸಂದರ್ಭದಲ್ಲಿ ಯಾವುದೇ ಟೆಂಡರ್ ಕರೆಯದೆ, ಟ್ರಕ್ ಟರ್ಮಿನಲ್ ಗಳು ನವೀಕರಣ ಹಾಗೂ ನಿರ್ವಹಣೆ ಕಾಮಗಾರಿ ನಡೆಸಲಾಗಿದೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಬರೋಬ್ಬರಿ 47 ಕೋಟಿ ರೂಪಾಯಿ ಹಣವನ್ನು ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇದರ ಹಿಂದೆ ಇದ್ದ ನಿಗಮದ ಮಾಜಿ ಉಪ ನಿರ್ದೇಶಕರಾದ ಎಸ್. ಶಂಕರಪ್ಪ ಅವರನ್ನು ಇದೇ ಪ್ರಕರಣದಲ್ಲಿ ಸಿಬಿಐ ಬಂಧಿಸಿತ್ತು. ಈ ವಿಚಾರ ತಿಳಿದು ವೀರಯ್ಯನವರು ಬೆಂಗಳೂರಿನ ಕೋರ್ಟಿಗೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಇಂದು ಈ ಅರ್ಜಿ ವಜಾ ಆದ ಕಾರಣ, ಮೈಸೂರಿನಲ್ಲಿ ವೀರಯ್ಯನವರನ್ನು ಸಿಬಿಐ ಬಂಧಿಸಿದೆ. ಈ ಭಾರಿ ಹಗರಣವು ನಿಗಮದ ಉಪನಿರ್ದೇಶಕರಾಗಿ ಸಿ.ಎನ್. ಶಿವಪ್ರಕಾಶ್ ಅವರು ಅಧಿಕಾರ ವಹಿಸಿಕೊಂಡ ನಂತರ ಹೊರ ಬಂದಿದೆ.