India
ನೇಪಾಳದ ಮೇಯರ್ ಪುತ್ರಿ, ಗೋವಾದಲ್ಲಿ ನಾಪತ್ತೆ.
ಪಣಜಿ: ನೇಪಾಳದ ಧಂಗಧಿ ಸಬ್ ಮೆಟ್ರೋಪಾಲಿಟನ್ ಸಿಟಿಯ ಮೇಯರ್ ಆದ ಗೋಪಾಲ್ ಹಮಲ್ ಅವರ ಪುತ್ರಿಯಾದ ಆರತಿ ಹಮಲ್ ಅವರು ಗೋವಾದಲ್ಲಿ ಕಾಣೆಯಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಗೋವಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ.
ಆರತಿ ಅವರು ‘ಓಶೋ ಮೆಡಿಟೇಶನ್’ನ ಅನುಯಾಯಿ ಆಗಿದ್ದರು, ಹಾಗೂ ಕೆಲವು ತಿಂಗಳುಗಳಿಂದ ಗೋವಾದಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ. ಅವರು 36 ವರ್ಷ ವಯಸ್ಕರಾಗಿದ್ದು, ಧ್ಯಾನ ಹಾಗೂ ಆಧ್ಯಾತ್ಮಿಕತೆಯಲ್ಲಿ ಆಸಕ್ತಿಯನ್ನು ಹೊಂದಿದ್ದರು ಎನ್ನಲಾಗಿದೆ. ಕೊನೆಯ ಬಾರಿ ಆರತಿ ಅವರನ್ನು ಅಶ್ವೆಮ್ ಬ್ರಿಡ್ಜ್ ಬಳಿ ನೋಡಲಾಗಿತ್ತು ಎಂದು ತಿಳಿದು ಬಂದಿತ್ತು.
ಕಳೆದ ಸೋಮವಾರ ಮಾರ್ಚ್ 25ರಂದು ಕಾಣೆಯಾಗಿದ್ದ ಆರತಿ ಹಮಲ್ ಅವರ ಪ್ರಕರಣ, ಭಾರತಕ್ಕೆ ಆಗಮಿಸುವ ವಿದೇಶಿ ಪ್ರವಾಸಿಗರು ಇಲ್ಲಿ ಎಷ್ಟು ಸುರಕ್ಷಿತರಾಗಿ ಇರಲಿದ್ದಾರೆ ಎಂಬುದರ ಬಗ್ಗೆ ಪ್ರಶ್ನೆ ಎದುರಾಗಿದೆ.