India
ಬಿಸಿ ಗಾಳಿಗೆ ಉತ್ತರ ಭಾರತ ತರತರ!

ನವದೆಹಲಿ: ಈ ಬಾರಿಯ ಬೇಸಿಗೆ ಬಿಸಿ ತುಸು ಹೆಚ್ಚೇ ಪರಿಣಾಮ ಬೀರುತ್ತಿದೆ. ಜನರು ತಾಪಕ್ಕೆ ಒಣಗಿ, ಮಳೆಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಈ ಬಿಸಿ ಗಾಳಿ ದಕ್ಷಿಣ ಭಾರತ ಅಷ್ಟೇ ಅಲ್ಲದೆ, ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಹಾಹಾಕಾರ ಎಬ್ಬಿಸಿದೆ.
ಉತ್ತರ ಭಾರತದಲ್ಲಿ 45 ಡಿಗ್ರಿ ಸೆಲ್ಸಿಯಸ್ ತಲುಪಿದ ತಾಪಮಾನ. ಬಿಸಿ ಗಾಳಿಯ ಹೊಡೆತಕ್ಕೆ ಜನರು ಕಂಗಾಲಾಗಿದ್ದಾರೆ. ಇದು ನವದೆಹಲಿ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಮುಂದುವರೆಯಲಿದೆ ಎಂದು ಭಾರತದ ಹವಾಮಾನ ಇಲಾಖೆ ತಿಳಿಸಿದೆ.