ಮಂತ್ರಿ ಮಾಲ್‌ನಲ್ಲಿ ನೂರು ದಿನಗಳ ಶಾಪಿಂಗ್ ಫೆಸ್ಟಿವಲ್: ನಟಿ ಶ್ರೀಯಾ ಶರಣ್‌ರಿಂದ ಅದ್ದೂರಿ ಚಾಲನೆ..!

ಬೆಂಗಳೂರು: ಮಲ್ಲೇಶ್ವರದ ಮಂತ್ರಿ ಮಾಲ್‌ನಲ್ಲಿ ನೂರು ದಿನಗಳ ಭರ್ಜರಿ ಶಾಪಿಂಗ್ ಫೆಸ್ಟಿವಲ್‌ಗೆ ಖ್ಯಾತ ನಟಿ ಶ್ರಿಯಾ ಶರಣ್ ಅವರಿಂದ ಅದ್ದೂರಿ ಚಾಲನೆ ನೀಡಲಾಗಿದೆ. ಮಂತ್ರಿ ಮಾಲ್ ನ ಮುಖ್ಯಸ್ಥ ಕಾಮಾಕ್ಷಿ ಮಂತ್ರಿ ಮತ್ತು ರಿಟೇಲ್ & ಕಮರ್ಷಿಯಲ್ ಸಿ.ಇ.ಓ ವಿಶಾಲ್ ಗುಪ್ತ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
“ನನಗೆ ಬೆಂಗಳೂರು ಅತೀ ಹೆಚ್ಚು ಇಷ್ಟ. ಇದು ನನಗೆ ಮನೆಯಂತೆ ಅನ್ನಿಸುತ್ತದೆ,” ಎಂದು ಶ್ರಿಯಾ ಶರಣ್ ಹೆಮ್ಮೆಯಿಂದ ಹೇಳಿದರು. “ಇಲ್ಲಿ ಶಾಪಿಂಗ್ ಮಾಡುವುದು ನನಗೆ ಇಷ್ಟವಿದೆ, ಈಗ ಮಕ್ಕಳು ಬಂದ ಮೇಲೆ ಅವರಿಗಾಗಿ ಹೆಚ್ಚು ಶಾಪಿಂಗ್ ಮಾಡುತ್ತೇನೆ,” ಎಂದು ಅವರು ತಮ್ಮ ಖಾಸಗಿ ಜೀವನದ ನೆನಪನ್ನು ಹಂಚಿಕೊಂಡರು. ಶಾಪಿಂಗ್ ಫೆಸ್ಟಿವಲ್‌ನಲ್ಲಿ ಎಲ್ಲರೂ ಕುಟುಂಬ ಸಮೇತ ಭಾಗವಹಿಸಬೇಕೆಂದು ಅವರು ಕರೆ ನೀಡಿದರು.
ನೂರು ದಿನಗಳ ಈ ಭರ್ಜರಿ ಶಾಪಿಂಗ್ ಮಹೋತ್ಸವವು ಜನವರಿ 26, 2024ರವರೆಗೆ ನಡೆಯಲಿದ್ದು, ದೀಪಾವಳಿ, ಕ್ರಿಸ್ಮಸ್, ಮತ್ತು ಸಂಕ್ರಾಂತಿ ಹಬ್ಬಗಳೊಂದಿಗೆ ಸಂಭ್ರಮವನ್ನು ಹೆಚ್ಚಿಸಲಿದೆ. ಈ ಸಮಯದಲ್ಲಿ ಸಾಕಷ್ಟು ರಿಯಾಯಿತಿಗಳು ಮತ್ತು ಆಕರ್ಷಕ ಬಹುಮಾನಗಳು ಲಭ್ಯವಿದ್ದು, ಮೊದಲ ಬಹುಮಾನ ಒಂದು ಕಾರ್ ಆಗಿದೆ ಎಂಬುದು ಆಕರ್ಷಣೆಯ ಕೇಂದ್ರವಾಗಿದೆ.
ಕಾಮಾಕ್ಷಿ ಮಂತ್ರಿ ಅವರ ಪ್ರಕಾರ, “ಈ ಶಾಪಿಂಗ್ ಫೆಸ್ಟಿವಲ್‌ನಲ್ಲಿ ನೂರಾರು ಬ್ರಾಂಡ್ಗಳು ಭಾಗವಹಿಸುತ್ತಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಮನರಂಜನೆಗೆ ಪೂರಕವಾಗಲಿದೆ.”