CinemaEntertainmentIndiaNational
ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಗಾಯಕಿ ಶಾರದಾ ಸಿನ್ಹಾ ನಿಧನ: ಗಾಯನ ಲೋಕದ ಕಣ್ಣೀರು..!

ನವದೆಹಲಿ: ಹಿರಿಯ ಗಾಯಕಿ ಹಾಗೂ ಪದ್ಮಭೂಷಣ ಪುರಸ್ಕೃತ ಶಾರದಾ ಸಿನ್ಹಾ ಅವರು ತಮ್ಮ 72ನೇ ವಯಸ್ಸಿನಲ್ಲಿ ನಮ್ಮನ್ನಗಲಿದ್ದಾರೆ. ಭೋಜಪುರಿ, ಮೈಥೀಲಿ ಮತ್ತು ಹಿಂದಿ ಗಾಯನ ರಂಗದಲ್ಲಿ ತಮ್ಮ ಇಂಪಾದ ಧ್ವನಿಯ ಮೂಲಕ ಪ್ರಖ್ಯಾತಿ ಗಳಿಸಿದ್ದ ಶಾರದಾ, ಭಾರತೀಯ ಜನಪದ ಸಂಗೀತದಲ್ಲಿ ಅನನ್ಯ ಗುರುತನ್ನು ಸಂಪಾದಿಸಿದ್ದರು.
2018ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡುವ ಮೂಲಕ ರಾಷ್ಟ್ರವು ಗೌರವ ಅರ್ಪಿಸಿತ್ತು. ದೇಶಾದ್ಯಂತ ಬಿಹಾರದ ಹಬ್ಬ-ಹರಿದಿನಗಳಲ್ಲಿ ಶಾರದಾ ಅವರ ಹೃದಯಸ್ಪರ್ಶಿ ಹಾಡುಗಳು ನಿಜಕ್ಕೂ ಜನರನ್ನು ಮಂತ್ರಮುಗದ್ಧಗೊಳಿಸುತ್ತಿತ್ತು. ಇವರ ಪ್ರಸಿದ್ಧ ಗೀತೆಗಳು ಜನಮನದಲ್ಲಿ ಆಳವಾಗಿ ನೆಲೆಸಿದೆ.
ಅವರ ನಿಧನವು ಕಲಾರಂಗದಲ್ಲಿ ಅಪಾರ ನಷ್ಟವನ್ನು ತಂದಿದ್ದು, ಸಂಗೀತ ಪ್ರಿಯರು ಮತ್ತು ಹಿರಿಯ ಕಲಾವಿದರು ಶೋಕ ವ್ಯಕ್ತಪಡಿಸಿದ್ದಾರೆ. ಭಾರತೀಯ ಜನಪದ ಸಂಗೀತದ ಅಭಿಮಾನಿಗಳಿಗೆ ಶಾರದಾ ಅವರ ಧ್ವನಿ ಎಂದಿಗೂ ಜೀವಂತವಾಗಿರುತ್ತದೆ. ಅವರು ತೋರಿಸಿದ ಗಾನಪಥವು ಯುವ ಪೀಳಿಗೆಗೆ ಪ್ರೇರಣೆ ನೀಡುವಂತಿದೆ.