Politics
ಪುರಿಯ ಜಗನ್ನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಪಿಎಂ ಮೋದಿ.

ಪುರಿ: ಒರಿಸ್ಸಾ ರಾಜ್ಯದಲ್ಲಿ ಮತಬೇಟೆ ನಡೆಸುತ್ತಿರುವ ನರೇಂದ್ರ ಮೋದಿಯವರು ಇಂದು, ಜಗತ್ಪ್ರಸಿದ್ಧ, ತರ್ಕಕ್ಕೆ ಸಿಗದ ಗೌಪ್ಯತೆಗಳನ್ನು ತನ್ನಲ್ಲಿ ಹುದುಗಿಸಿಕೊಂಡ ದೇವಾಲಯವಾದ ಪುರಿ ಜಗನ್ನಾಥ್ ಮಂದಿರಕ್ಕೆ ಭೇಟಿ ನೀಡಿದರು.
ಇದಾದ ನಂತರ ಪ್ರಧಾನಿ ಮೋದಿ ಅವರು ಮಾರಿಚ್‌ಕೋಟೆ ಚೌಕದಿಂದ ಪ್ರಿಯ ಗ್ರ್ಯಾಂಡ್ ರಸ್ತೆಯಲ್ಲಿರುವ ವೈದ್ಯಕೀಯ ಚೌಕದವರೆಗೆ ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ ಮೋದಿ ಅವರ ಜೊತೆಗೆ ಒರಿಸ್ಸಾ ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ಮನೋಹರ್ ಸಮಾಲ್, ಪಕ್ಷದ ಸಂಸದ ಅಭ್ಯರ್ಥಿ ಆದಂತಹ ಶ್ರೀ ಸಂಬಿತ್ ಪಾತ್ರ ಮತ್ತು ಪುರಿ ವಿಧಾನಸಭಾ ನಾಮನಿರ್ದೇಶಿತ ಶಾಸಕ ಅಭ್ಯರ್ಥಿ ಶ್ರೀ ಜಯಂತ್ ಸಾರಂಗಿ ಉಪಸ್ಥಿತರಿದ್ದರು.