Entertainment
ಅಂಬಾನಿ ಪ್ರೀ-ವೆಡ್ಡಿಂಗ್ ಕ್ರೂಝ್‌ನಲ್ಲಿ ರಾಮೇಶ್ವರಂ ಕೆಫೆ ಉಪಹಾರ.

ಮುಂಬೈ: ದೇಶ ವಿದೇಶಗಳ ಗಣ್ಯತೆಗಳು ಒಂದುಗೂಡಲಿರುವ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ಪ್ರೀ-ವೆಡ್ಡಿಂಗ್ ಕ್ರೂಝ್‌ನಲ್ಲಿ ನಮ್ಮ ಬೆಂಗಳೂರಿನ ರಾಮೇಶ್ವರಂ ಕೆಫೆ ಉಪಹಾರಗಳು ಸೆಲೆಬ್ರಿಟಿಗಳ ನಾಲಿಗೆಯ ರುಚಿ ಹೆಚ್ಚಿಸಲಿದೆ.
ಈ ಕುರಿತು ರಾಮೇಶ್ವರಂ ಕೆಫೆ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ. ಇದು ಅಂಬಾನಿ ಫ್ರೀ ವೆಡ್ಡಿಂಗ್ ಕ್ರೂಝ್ ನಲ್ಲಿ ದಕ್ಷಿಣ ಭಾರತದ ಖಾದ್ಯಗಳನ್ನು ಉಣಬಡಿಸುವ ಏಕೈಕ ರೆಸ್ಟೋರೆಂಟ್ ಆಗಿದೆ ಎಂದು ಹೇಳಿಕೊಂಡಿದ್ದಾರೆ.