Bengaluru
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ ಮಳೆ ಸಂಭವಿಸಿದೆ.
ಉಡುಪಿ: ಕರ್ನಾಟಕದಲ್ಲಿ ವರುಣನ ಆರ್ಭಟ ಇನ್ನು ಮುಗಿದಿಲ್ಲ. ಕಳೆದ 24 ಗಂಟೆಗಳಲ್ಲಿ ಕರ್ನಾಟಕದ ಕೆಲ ಜಿಲ್ಲೆಗಳು ಭಾರಿ ಪ್ರಮಾಣದ ಮಳೆಯನ್ನು ಪಡೆದಿದೆ. ಅಂತಹ ಜಿಲ್ಲೆಗಳ ಮಾಹಿತಿಯನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
- ವ್ಯಾಪಕ ಮಳೆ ಜಿಲ್ಲೆಗಳು- ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ ಹಾಗೂ ಹಾವೇರಿ.
- ಸಾಕಷ್ಟು ವ್ಯಾಪಕ ಮಳೆ ಜಿಲ್ಲೆಗಳು- ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ಕೊಡಗು ಹಾಗೂ ದಾವಣಗೆರೆ.
- ಚದುರಿದ ಮಳೆ ಜಿಲ್ಲೆಗಳು- ಬಾಗಲಕೋಟೆ, ದಕ್ಷಿಣ ಕನ್ನಡ, ಧಾರವಾಡ, ಬೆಂಗಳೂರು ನಗರ, ಬೆಳಗಾವಿ ಹಾಗೂ ಯಾದಗಿರಿ.
- ಪ್ರತ್ಯೇಕ (ಐಸೋಲೇಟೆಡ್) ಮಳೆ ಜಿಲ್ಲೆಗಳು- ತುಮಕೂರು, ವಿಜಯಪುರ, ಹಾಸನ, ಚಿಕ್ಕಬಳ್ಳಾಪುರ, ರಾಮನಗರ, ಕಲಬುರ್ಗಿ, ಮಂಡ್ಯ, ವಿಜಯನಗರ, ಚಿತ್ರದುರ್ಗ, ಕೋಲಾರ, ಕೊಪ್ಪಳ, ಗದಗ, ರಾಯಚೂರು, ಮೈಸೂರು, ಬೀದರ್ ಮತ್ತು ಬಳ್ಳಾರಿ.
- ಒಣ ಅಥವಾ ಅತ್ಯಲ್ಪ ಮಳೆ ಪಡೆದು ಜಿಲ್ಲೆ- ಚಾಮರಾಜನಗರ.
- ಕಳೆದ 24 ಗಂಟೆಗಳಲ್ಲಿ ಅತ್ಯಂತ ಹೆಚ್ಚು ಮಳೆ ಪಡೆದ, ಅಂದರೆ 101.ಮಿಮೀ ಮಳೆಯನ್ನು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕಲತ್ತೂರು ಗ್ರಾಮ ಪಂಚಾಯಿತಿ ವಲಯ ಪಡೆದಿದೆ.