ಹೊಸ ಅವತಾರದಲ್ಲಿ ರಿಷಬ್ ಶೆಟ್ಟಿ: ಕತ್ತಿ ಗುರಾಣಿ ಹಿಡಿದು ಗತ್ತು ಪ್ರದರ್ಶನ!

ಬೆಂಗಳೂರು: ಸ್ಯಾಂಡಲ್‌ವುಡ್‌ನ ಡಿವೈಸ್ ಸ್ಟಾರ್ ರಿಷಬ್ ಶೆಟ್ಟಿ ಈಗ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಉಂಟುಮಾಡಿದ್ದಾರೆ. ತಮ್ಮ ಮುಂಬರುವ ಚಿತ್ರವಾದ ಕಾಂತಾರ ಫ್ರೀಕ್ವೆಲ್‌ನ ದೇಹ ದಂಡಿಸಿ ಕಟ್ಟುಮಸ್ಥಾದ ರಿಷಬ್ ಶೆಟ್ಟಿ ಅವರು ಈಗ ಕತ್ತಿ ಗುರಾಣಿ ಹಿಡಿದು ಯುದ್ಧ ಕಲೆ ಪ್ರದರ್ಶಿಸುತ್ತಿದ್ದಾರೆ. ಈ ಚಿತ್ರವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ರಿಷಬ್ ಶೆಟ್ಟಿ ಅವರು ಅಭಿಮಾನಿಗಳಲ್ಲಿ ರೋಮಾಂಚನ ಸೃಷ್ಟಿಸಿದ್ದಾರೆ.
ಕಾಂತಾರ ಮೊದಲ ಭಾಗದ ಅದ್ಭುತ ಯಶಸ್ಸಿನಿಂದ ಪ್ರೇರಣೆ ಹೊಂದಿರುವ ಶೆಟ್ಟಿಯವರು, ಮುಂಬರುವ ಕಾಂತಾರ ಫ್ರಿಕ್ವೆಲ್ ಚಿತ್ರವನ್ನು ಇನ್ನಷ್ಟು ವಿಜ್ರಂಬಣೆಯಿಂದ ತೆರೆಗೆ ತರಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಕಳೆದ ಬಾರಿ ಖುದ್ದು ಕಂಬಳದ ಗದ್ದೆಯಲ್ಲಿ ಕೋಣಗಳನ್ನು ಹಿಡಿದು ಓಡಿದ ರಿಷಬ್ ಶೆಟ್ಟಿ ಅವರು, ಈಗ ಮತ್ತೊಮ್ಮೆ ಕತ್ತಿ ಗುರಾಣಿಯ ಕಲೆಯನ್ನು ಮುಂದಿನ ಚಿತ್ರದಲ್ಲಿ ತೋರಿಸಲಿದ್ದಾರೆ ಎಂದು ಕಾಣುತ್ತಿದೆ.
ಈಗ ಈ ಚಿತ್ರ ಭಾರಿ ವೈರಲ್ ಆಗಿದ್ದು, ಕಾಂತಾರ ಫ್ರಿಕ್ವೆಲ್ ಚಿತ್ರಕ್ಕೆ ಎಷ್ಟು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂಬ ಸ್ಪಷ್ಟ ಚಿತ್ರಣ ಇದರಿಂದ ಕಾಣುತ್ತದೆ.