ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡ ರಾಕಿ ಬಾಯ್.

ಮುಂಬೈ: ರಾಕಿಂಗ್ ಸ್ಟಾರ್ ಯಶ್ ತಮ್ಮ ಹೊಸ ಹೇರ್ ಸ್ಟೈಲ್ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದ್ದಾರೆ. ಇಂದು ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ಮದುವೆ ಸಮಾರಂಭಕ್ಕೆ ಹಾಜರಾಗಲು ಮುಂಬೈ ಏರ್ಪೋರ್ಟ್‌ಗೆ ಯಶ್ ಹಾಗೂ ಅವರ ಪತ್ನಿ ರಾಧಿಕಾ ಪಂಡಿತ್ ಬಂದಿಳಿದಿದ್ದರು. ಯಶ್ ಅವರ ಅನಿರೀಕ್ಷಿತ ರೂಪಾಂತರ ಅಭಿಮಾನಿಗಳಿಗೆ ಆಶ್ಚರ್ಯ ಹಾಗೂ ಕುತೂಹಲ ಮೂಡಿಸಿದೆ.
ಇಲ್ಲಿಯವರೆಗೆ ತಮ್ಮ ಕೆಜಿಎಫ್ ಚಿತ್ರದ ಲುಕ್ ಮೂಲಕ ಸದಾ ಕಾಣಿಸಿಕೊಳ್ಳುತ್ತಿದ್ದ ಯಶ್ ಅವರು, ಈಗ ವಿನೂತನ ಹೇರ್ ಕಟ್ ನೊಂದಿಗೆ ಪ್ರತ್ಯಕ್ಷರಾಗಿದ್ದಾರೆ. ಇವರ ಬಹು ನಿರೀಕ್ಷಿತ ‘ಟಾಕ್ಸಿಕ್’ ಚಿತ್ರಕ್ಕಾಗಿ ಈ ರೀತಿಯ ಆಕರ್ಷಕ ಹೇರ್ ಕಟ್‌ನ್ನು ಮಾಡಿಸಿಕೊಂಡಿರಬಹುದು ಎಂದು ಊಹಿಸಲಾಗಿದೆ. ಈ ಚಿತ್ರದಲ್ಲಿ ಕರೀನಾ ಕಪೂರ್, ಸಾಯಿ ಪಲ್ಲವಿ, ಸಂಯುಕ್ತ ಮೆನನ್, ನವಾಜುದ್ದೀನ್ ಸಿದ್ದೀಕಿ, ಶೈನ್ ಟಾಮ್ ಚಾಕೋ, ಧನಂಜಯ್ ಹಾಗೂ ಶೃತಿ ಹಾಸನ್ ಅವರು ಅಭಿನಯಿಸಲಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ. ಈ ಚಿತ್ರದ ನಿರ್ದೇಶನವನ್ನು ಮಲಯಾಳಂನ ಖ್ಯಾತ ನಿರ್ದೇಶಕಿ, ಗಾಯತ್ರಿ ಮೋಹನ್ ದಾಸ್ ಅವರು ಮಾಡುತ್ತಿದ್ದಾರೆ.