BengaluruCinemaEntertainment

ಎಮ್ಎಮ್‌ಬಿ ಲೆಗಸಿ ಸಭಾಂಗಣದ ಎರಡನೇ ವಾರ್ಷಿಕೋತ್ಸವ: ಯಾವ್ಯಾವ ಗಣ್ಯರು ಉಪಸ್ಥಿತರಿದ್ದರು..?!

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಮಹತ್ವದ‌ ಇವೆಂಟ್‌ಗಳ ಕೇಂದ್ರವಾಗಿ ಪರಿಣಮಿಸಿರುವ ಎಮ್ಎಮ್‌ಬಿ ಲೆಗಸಿ ಸಭಾಂಗಣದ ದ್ವಿತೀಯ ವಾರ್ಷಿಕೋತ್ಸವಕ್ಕೆ ಬಣ್ಣದ ಲೋಕದ ತಾರೆಗಳು ಸಾಕ್ಷಿಯಾದರು. ಚಿತ್ರದ ಪ್ರಚಾರವನ್ನು ಸುಲಭಗೊಳಿಸುವ ಕನಸಿನಿಂದ ಮೂಡಿಬಂದ ಈ ಸಭಾಂಗಣ, ನಿರ್ಮಾಪಕ, ನಿರ್ದೇಶಕ, ನಟ ಹಾಗೂ ಇವೆಂಟ್ ಮ್ಯಾನೇಜ್ಮೆಂಟ್‌ ತಜ್ಞ ನವರಸನ್ ಅವರ ಕನಸಿನ ಕೂಸು. 300ಕ್ಕೂ ಹೆಚ್ಚು ಚಿತ್ರರಂಗದ ಕಾರ್ಯಕ್ರಮಗಳಿಗೆ ಸ್ಥಳ ಒದಗಿಸಿರುವ ಎಮ್ಎಮ್‌ಬಿ ಲೆಗಸಿ, ಇದೀಗ ಎರಡು ವರ್ಷಗಳ ಯಶಸ್ವಿ ಪಯಣವನ್ನು ಮುಗಿಸಿದೆ.

ಪ್ರಮುಖರು ಏನೆಲ್ಲಾ ಹೇಳಿದರು?

ಸಂಭ್ರಮದ ಈ‌ ಕ್ಷಣದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್, ನಟರಾದ ಚಂದನ್ ಶೆಟ್ಟಿ, ಶ್ರೇಯಸ್ ಮಂಜು, ನಿರ್ಮಾಪಕರಾದ ಕೃಷ್ಣ ಸಾರ್ಥಕ್, ಗೋವಿಂದರಾಜು, ಪ್ರಚಾರಕರ್ತರು ಮತ್ತು ಇತರ ಗಣ್ಯರು ಭಾಗವಹಿಸಿ ನವರಸನ್ ಅವರಿಗೆ ಶುಭಾಶಯ ಕೋರಿದರು. ನವರಸನ್ ತಮ್ಮ‌ ಉದ್ದೇಶವನ್ನು ಹಂಚಿಕೊಂಡು, “ನಿರ್ಮಾಪಕರಿಗಾಗಿ ಕಡಿಮೆ ಬಜೆಟ್‌ನಲ್ಲಿ ಸೌಲಭ್ಯಪೂರ್ಣ ಸಭಾಂಗಣದ ಅವಶ್ಯಕತೆಯಿಂದ ಎಮ್ಎಮ್‌ಬಿ ಲೆಗಸಿ ಸ್ಥಾಪನೆಯ ಕನಸು ಮೂಡಿತು” ಎಂದು ಹೇಳಿದರು.

ನವರಸನ್ ಅವರ ಪರಿಶ್ರಮದ ಫಲ:

ನವರಸನ್ ಅವರು ಜಿ.ಟಿ.ಮಾಲ್ ನ ನಾಲ್ಕನೇ ಅಂತಸ್ತಿನಲ್ಲಿದ್ದ ಖಾಲಿ ಸ್ಥಳವನ್ನು ಎಮ್ಎಮ್‌ಬಿ ಲೆಗಸಿಯಾಗಿ ಪರಿವರ್ತಿಸಿ, ಚಲನಚಿತ್ರದ ಟೀಸರ್, ಟ್ರೇಲರ್, ಹಾಡು ಬಿಡುಗಡೆ ಹಾಗೂ ಪತ್ರಿಕಾಗೋಷ್ಠಿಗಳಿಗೆ ಪೂರಕ ಸ್ಥಳವನ್ನಾಗಿ ರೂಪಿಸಿದರು. “ಇದು ಆರ್ಥಿಕ ಲಾಭಕ್ಕಿಂತೆ ಹೆಚ್ಚಾಗಿ, ಚಿತ್ರರಂಗದ ನಿರ್ಮಾಪಕರಿಗೆ ಸಹಾಯವಾಗಲೆಂದೇ ರೂಪಿಸಿದ ಪ್ರಜ್ಞಾವಂತ ಸೌಲಭ್ಯವಾಗಿದೆ” ಎಂದು ನವರಸನ್ ಹೇಳಿದರು.

ನವರಸನ್ ಅವರು ಈ‌ ಸಂದರ್ಭದಲ್ಲಿ, “ಎಮ್ಎಮ್‌ಬಿ ಲೆಗಸಿಯ ಎರಡನೇ ವರ್ಷದ ಯಶಸ್ಸು ನಾನು ಕನಸು ಕಂಡಂತೆ ನಡೆಯುತ್ತಿದೆ. ನನ್ನ ಬಳಿ ಈ ಜಾಗದ ಆರ್ಥಿಕ ಲಾಭವಿಲ್ಲದಿದ್ದರೂ, ಕನ್ನಡ ಚಿತ್ರರಂಗಕ್ಕೆ ನನ್ನ ಕೊಡುಗೆಯಾಗಿದೆ. ಈ ಕನಸು ನನಸಾಗಿಸಲು ಬೆನ್ನಿಗೆ ನಿಂತ ಗಣ್ಯರಿಗೆ ಧನ್ಯವಾದ” ಎಂದು ಮನದಾಳದಿಂದ ತಿಳಿಸಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button